ಪುತ್ತೂರು (www.vknews.in) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರ, ಚುನಾವಣಾ ಉಸ್ತುವಾರಿಗಳ ಹಾಗೂ ವಿಭಾಗೀಯ ಉಸ್ತುವಾರಿಗಳ ಚುನಾವಣಾ ಪೂರ್ವ ತಯಾರಿ ಜಂಟಿ ಸಭೆಯು ಪಕ್ಷದ ಕಛೇರಿಯಲ್ಲಿ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಕೆ.ಎ ಹಾಗೂ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಚುನಾವಣಾ ತಯಾರಿಯ ಬಗ್ಗೆ ಉಸ್ತುವಾರಿ ಗಳಿಗೆ ಸಲಹೆಯನ್ನು, ಮಾರ್ಗದರ್ಶನಗಳನ್ನು ನೀಡಿದರು.
ಸಭೆಯಲ್ಲಿ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಹಮೀದ್ ಸಾಲ್ಮರ, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ವಿಧಾನಸಭಾ ಸಮಿತಿಯ ಪಧಾದಿಕಾರಿಗಳು, ಹಾಗೂ ಎಲ್ಲಾ ಚುನಾವಣಾ ಉಸ್ತುವಾರಿಗಳು ಮತ್ತು ಎಲ್ಲಾ ವಿಭಾಗೀಯ ಉಸ್ತುವಾರಿ ಗಳು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.