ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಸೋಮವಾರ ರಾತ್ರಿ ನಡೆದ ಅಬುಧಾಬಿ ಬಿಗ್ ಟಿಕೆಟ್ 250ನೇ ಸರಣಿ ಡ್ರಾದಲ್ಲಿ ಭಾರತೀಯನೊಬ್ಬನಿಗೆ 2 ಕೋಟಿ (INR 44 ಕೋಟಿಗೂ ಹೆಚ್ಚು) ಬಹುಮಾನ ಲಭಿಸಿದೆ. ಬೆಂಗಳೂರು ನಿವಾಸಿ ಅರುಣ್ ಕುಮಾರ್ ವಡಕ್ಕೆ ಕೋರೋತ್ ಅವರು ಟಿಕೆಟ್ ಸಂಖ್ಯೆ 261031 ನೊಂದಿಗೆ ಪ್ರಥಮ ಬಹುಮಾನ ಪಡೆದರು. ಅವರು ಮಾರ್ಚ್ 22 ರಂದು ಆನ್ಲೈನ್ನಲ್ಲಿ ಬಹುಮಾನದ ಟಿಕೆಟ್ ಖರೀದಿಸಿದ್ದಾರೆ. ಲಾಟರಿ ನಡೆಯುವ ಸ್ಥಳದಿಂದ ಬಿಗ್ ಟಿಕೆಟ್ ಅಧಿಕಾರಿಗಳು ಕೋಟ್ಯಧಿಪತಿಯಾದ ಬಗ್ಗೆ ಅರುಣ್ ಕುಮಾರ್ ಗೆ ತಿಳಿಸಲು ಕರೆ ಮಾಡಿದರು, ಆದರೆ ಅರುಣ್ ಕುಮಾರ್ ಯಾರೋ ಮೋಸ ಮಾಡುತ್ತಿದ್ದಾರೆಂದು ಭಾವಿಸಿ ಫೋನ್ ಸ್ಥಗಿತಗೊಳಿಸಿದರು.
ಡ್ರೀಮ್ ಕಾರ್ ಸರಣಿ ಸೇರಿದಂತೆ 11 ದೊಡ್ಡ ಟಿಕೆಟ್ ಡ್ರಾಗಳಲ್ಲಿ ಒಂಬತ್ತನ್ನು ಭಾರತೀಯರು ಗೆದ್ದಿದ್ದಾರೆ. ಬೈ ಟು, ಗೆಟ್ ಒನ್ ಆಫರ್ ಮೂಲಕ ಉಚಿತವಾಗಿ ಪಡೆದ ಟಿಕೆಟ್ ಮೂಲಕ ಮೂರು ಮಂದಿ ಅದೃಷ್ಟ ಖುಲಾಯಿಸಿದ್ದು ವಿಶೇಷ. ಬಹ್ರೇನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಸುರೇಶ್ ಮಥನ್ ಎರಡನೇ ಬಹುಮಾನ 1 ಲಕ್ಷ ದಿರ್ಹಂ ಗೆದ್ದಿದ್ದಾರೆ. ಅವರು 018462 ಟಿಕೆಟ್ನೊಂದಿಗೆ ಅದೃಷ್ಟವನ್ನು ಪಡೆದರು. ಇಂದಿನ ಡ್ರಾದಲ್ಲಿ ಭಾರತೀಯ ಪ್ರಜೆ ಮೊಹಮ್ಮದ್ ಶಫೀಕ್ 333142 ಸಂಖ್ಯೆಯೊಂದಿಗೆ 90,000 ದಿರ್ಹಂ ಮತ್ತು 259107 ಸಂಖ್ಯೆಯೊಂದಿಗೆ ಇನ್ನೋರ್ವ ಭಾರತೀಯ ರಿಯಾಜ್ ತಿರುವತ್ತುತ್ತೋಡಿ ನಾಲ್ಕನೇ ಬಹುಮಾನ Dh80,000 ಗಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.