ಮಸ್ಕತ್ (ವಿಶ್ವ ಕನ್ನಡಿಗ ನ್ಯೂಸ್) ; ಒಮಾನ್ ನಲ್ಲಿ ಶಾಲಾ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ 16 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಗುಬ್ರಾ ತಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅವರೂ ಅಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ 7.10ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಚಾಲಕ ಮಾತ್ರ ಕಾರಿನಲ್ಲಿದ್ದರು. ಶಾಲಾ ಬಸ್ನಲ್ಲಿ 14 ಮಕ್ಕಳು ಹಾಗೂ ಚಾಲಕ ಸೇರಿ 15 ಮಂದಿ ಇದ್ದರು. ಗಂಭೀರ ಗಾಯಗೊಂಡ ಮೂವರನ್ನು ಇಬ್ರಾ ಆಸ್ಪತ್ರೆಗೆ ರವಾನಿಸಲಾಗಿದೆ.
ದಿಮಾ ವಿಲಾಯತ್ ಮತ್ತು ಅಲ್ ತಯಿನ್ ಮಾರ್ಗದಲ್ಲಿ ಮಿನಿ ಬಸ್ ಮತ್ತು ಕಾರು ಡಿಕ್ಕಿ ಹೊಡೆದಿದೆ ಎಂದು ರಾಯಲ್ ಓಮನ್ ಪೊಲೀಸರು ತಿಳಿಸಿದ್ದಾರೆ. ಎರಡೂ ವಾಹನಗಳ ಪ್ರಯಾಣಿಕರು ಗಾಯಗೊಂಡಿದ್ದು, ಮೂವರನ್ನು ಹೊರತುಪಡಿಸಿ ಎಲ್ಲರೂ ನಂತರ ತಮ್ಮ ಮನೆಗೆ ಮರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
وقوع حادث تصادم بين مركبة وحافلة صغيرة تُقِل عددا من الطلاب على الطريق المؤدي إلى ولاية دماء والطائيين بمنطقة غبرة طام نتج عنه إصابة جميع من بالمركبتين، بينهما 3 إصابات خطيرة و 13 شخصًا بإصابات خفيفة. #شرطة_عمان_السلطانية — شرطة عُمان السلطانية (@RoyalOmanPolice) April 4, 2023
وقوع حادث تصادم بين مركبة وحافلة صغيرة تُقِل عددا من الطلاب على الطريق المؤدي إلى ولاية دماء والطائيين بمنطقة غبرة طام نتج عنه إصابة جميع من بالمركبتين، بينهما 3 إصابات خطيرة و 13 شخصًا بإصابات خفيفة. #شرطة_عمان_السلطانية
— شرطة عُمان السلطانية (@RoyalOmanPolice) April 4, 2023
ಚಾಲಕರು ತಮ್ಮ ವಾಹನಗಳನ್ನು ಚಾಲನೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು, ನಿಯಮಗಳನ್ನು ಪಾಲಿಸಬೇಕು ಮತ್ತು ಅಜಾಗರೂಕ ಚಾಲನೆಯಂತಹ ಉಲ್ಲಂಘನೆಗಳಿಂದ ದೂರವಿದ್ದು ಇತರರ ಜೀವ ಉಳಿಸಲು ಸಹಕರಿಸಬೇಕು ಎಂದು ಪೊಲೀಸರು ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.