ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯ್ಕುಡೆ ಎಂಬಲ್ಲಿ ಮನೆಯಿಂದ ಕೆಲಸಕ್ಕೆಂದು ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿದ್ದಾರೆ. ಪಕ್ಷಿಕೆರೆ ಕೊಯಿಕುಡೆ ನಿವಾಸಿ ಸ್ವಾತಿ ಕುಮಾರಿ (25) ನಾಪತ್ತೆಯಾದವರು.
ಕಿನ್ನಿಗೋಳಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ, ಎ.2ರಂದು ಬೆಳಗ್ಗೆ ಕೆಲಸಕ್ಕೆಂದು ಹೇಳಿ ಮನೆಯಿಂದ ತೆರಳಿದ್ದಾರೆ. ಬಳಿಕ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದಾರೆ ಎಂದು ಕುಟುಂಬಸ್ಥರು ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇವರ ಚಹರೆ ಇಂತಿದೆ ; 5 ಅಡಿ ಎತ್ತರ , ಎಣ್ಣೆ ಕಪ್ಪು ಮೈಬಣ್ಣ , ದುಂಡು ಮುಖ ಹೊಂದಿದ್ದು, ಕಾಣೆಯಾದ ದಿನ ಬಿಳಿ ಮತ್ತು ಕಪ್ಪು ಬಣ್ಣದಿಂದ ಕೂಡಿದ ಚೂಡಿದಾರ ಟಾಪ್, ಬಿಳಿಯ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಮುಲ್ಕಿ ಪೊಲೀಸ್ ಠಾಣೆ 824229 0533 ಅಥಾವಾ ಪೊಲೀಸ್ ನಿರೀಕ್ಷಕ +919480805332 ರಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.