ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) ; ಮುಸಲ್ಮಾನ ಬಾಂಧವರು ಪವಿತ್ರ ರಂಝಾನ್ ನಲ್ಲಿ ಆಚರಿಸಿಕೊಂಡು ಬರುವ ಉಪವಾಸವು ದೇವಭಕ್ತಿ ಹಾಗೂ ಬದುಕಲು ಶಕ್ತಿಯನ್ನು ಹೆಚ್ಚಿಸಲು ಮತ್ತು ಸಹಜೀವಿಗಳೊಡನೆ ಅನುಕಂಪ ತೋರಲು ಸಹಕಾರಿಯಾಗುತ್ತದೆ ಎಂದು ಧರ್ಮ ಗುರು ಗಳಾದ ಸಿರಾಜುದ್ದೀನ್ ಫೈಝಿ ಯವರು
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಆಶ್ರಯದಲ್ಲಿ ಪುತ್ತೂರು ಅಶ್ಮಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಇಫ್ತಾರ್ ಸಂಗಮದಲ್ಲಿ ಅವರು ಮುಖ್ಯ ಪ್ರವಚನಕಾರರಾಗಿ ಮಾತನಾಡುತ್ತಿದ್ದರು.
ಉಪವಾಸ ವೆಂದರೆ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರವಲ್ಲದೆ ಶರೀರರದ ಅಂಗಾಂಗಗಳನ್ನು ಸರ್ವ ಕೆಡುಕಿನಿಂದ ಕಾಪಾಡಿ ಒಳಿತಿನೆಡೆಗೆ ಸಾಗುವ ದಾರಿಯಲ್ಲಿ ಮುನ್ನಡೆಯಲು ತರಬೇತಿಯನ್ನು ಪಡೆಯುವುದಾಗಿದ್ದು, ಹಸಿವು ವ್ಯಕ್ತಿಯನ್ನು ದುರ್ಬಲ ಗೊಳಿಸುವುದೆಂಬ ಸಾಮಾನ್ಯ ನಿಯಮ ಮೀರಿ ಉಪವಾಸದ ಹಸಿವು ಮನುಷ್ಯನನ್ನು ಹೆಚ್ಚು ಪ್ರಬಲ ಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ದರ್ಬೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು, ಕಾರ್ಯದರ್ಶಿ ಚಂದ್ರಹಾಸ ರೈ ಬಿ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಡಾ ರಾಮಚಂದ್ರ ಅತಿಥಿ ಪರಿಚಯ ಮಾಡಿದರು, ಹಫ಼ೀಝ್ ರಹೀಮಾನ್ ಪ್ರಾರ್ಥಿಸಿ, ರೋ ಅಶ್ರಫ಼್ ಮುಕ್ವೆ,Advct ರೋ ಶಾಹಿರಾ ಜ಼ುಬೈರ್,ರೋ ನವಾಜ಼್ ಕುಂಜೂರು ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿದ್ದರು.
ವಲಯಸೇನಾನಿ ರೋ ಹರ್ಷಕುಮಾರ್ ಮಾಡಾವು,ರೋಟರಿ ಕ್ಲಬ್ ಸೆ೦ಟ್ರಲ್ ನ ಎಲ್ಲಾ ಪಧಾದಿಕಾರಿಗಳು ಬಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.