(ವಿಶ್ವ ಕನ್ನಡಿಗ ನ್ಯೂಸ್) : ಹಾವು ತನ್ನ ಖಾಸಗಿ ಭಾಗದಲ್ಲಿ ಕಚ್ಚಿ ನಂತರ ಅದೇ ರೀತಿ ಹೊಟ್ಟೆ ಸೇರಿದೆ ಎಂದು ಯುವಕ ವಿಚಿತ್ರ ಆರೋಪ ಮಾಡಿದ್ದಾನೆ. ಕೊತ್ವಾಲಿ ಮೂಲದ ಮಹೇಂದ್ರ ಎಂಬಾತ ವಿಚಿತ್ರ ಆರೋಪ ಹೊತ್ತು ಆಸ್ಪತ್ರೆಗೆ ಬಂದಿದ್ದಾನೆ.
ಯುವಕನ ಗಲಾಟೆ, ಸ್ಥಿತಿ ನೋಡಿ ವೈದ್ಯರು ಅಡ್ಮಿಟ್ ಮಾಡಿ ಎರಡು ದಿನ ಯುವಕನನ್ನು ಪರೀಕ್ಷಿಸಿದರೂ ಹಾವು ಪತ್ತೆಯಾಗಿರಲಿಲ್ಲ. ಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು, ಯುವಕ ಮಾದಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ. ಮಲವಿಸರ್ಜನೆ ವೇಳೆ ಹಾವು ಕಚ್ಚಿ ಖಾಸಗಿ ಅಂಗದ ಮೂಲಕ ಹೊಟ್ಟೆ ಸೇರಿದೆ ಎಂಬುದು ಯುವಕನ ವಾದ.
ವೈದ್ಯರು ದೇಹದ ಎಲ್ಲಾ ಭಾಗಗಳನ್ನು ಪರೀಕ್ಷಿಸಿದರು. ನೋವು ನಿವಾರಕ ಔಷಧವನ್ನೂ ನೀಡಲಾಯಿತು. ಯುವಕನ ಸಿಟಿ ಸ್ಕ್ಯಾನ್ ಮಾಡಲಾಗಿದ್ದು, ಮನೆಯವರಿಗೆ ಅದೇ ವಿಷಯ ತಿಳಿಸಿದ್ದಾನೆ. ಆದರೆ ಯುವಕನ ಸಮಸ್ಯೆ ಏನೆಂದು ವೈದ್ಯರಿಗೆ ಅರ್ಥವಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.