ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) | ಪತಿಯೊಂದಿಗೆ ಮಲಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮೃತರನ್ನು ಎಲಂಕುಲಂನ ಪುತ್ರೋಡಿ ನಿವಾಸಿ ಫಾತಿಮಾ ಫಹ್ನಾ (30) ಎಂದು ಗುರುತಿಸಲಾಗಿದೆ. ಆಕೆಯ ಪತಿ ಮನ್ನಾರ್ಕಾಡ್ ಪಲ್ಲಿಕುನ್ನು ನಿವಾಸಿ ಮುಹಮ್ಮದ್ ರಫೀಕ್ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ. ಕೈ ಕಾಲುಗಳನ್ನು ಕಿಟಕಿ ಮತ್ತು ಹಾಸಿಗೆಗೆ ಕಟ್ಟಿ, ಬಾಯಿಗೆ ಬಟ್ಟೆಯನ್ನು ತುರುಕಿ ಶವ ಪತ್ತೆಯಾಗಿದೆ. ಇಬ್ಬರೂ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.