ಸೌದಿ ಅರೇಬಿಯಾ (ವಿಶ್ವ ಕನ್ನಡಿಗ ನ್ಯೂಸ್) ; ಕಾರು ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಉಡುಪಿ ಕಾಪು ನಿವಾಸಿ ಜುಬೈಲ್ ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತಪಟ್ಟ ರಿಯಾಜ್ ಕಾಪು ಕೆಸಿಎಫ್ ಅಬುಹಾದ್ರಿಯ ಸೆಕ್ಟರ್, ಜುಬೈಲ್ ಇದರ ಈಸ್ಟ್ ಯುನಿಟ್ ನ ಪಬ್ಲಿಕೇಶನ್ ವಿಂಗ್ ನ ಕಾರ್ಯದರ್ಶಿ ಆಗಿದ್ದರು.
ಮಾ.25ರಂದು ಜುಬೈಲ್ ನಲ್ಲಿ ಉಂಟಾದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಯಾಜ್ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಇಂದು ವೆಂಟಿಲೇಟರ್ ನಿಂದ ತೆಗೆದಾಗ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ. ರಿಯಾಝ್ ನಿಧನದಿಂದ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ. ಅವರಿಗೆ ಮೂರು ವರ್ಷಗಳ ಮೊದಲು ವಿವಾಹವಾಗಿತ್ತು. ಮೃತದೇಹದ ಅಂತ್ಯಸಂಸ್ಕಾರ ಸೌದಿಯಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.