(www.vknews.in) : ಉಮ್ರಾ ತೀರ್ಥಯಾತ್ರೆ ಪ್ರತಿಯೊಬ್ಬ ವಿಶ್ವಾಸಿಯ ಆಸೆ ಮತ್ತು ಆಕಾಂಕ್ಷೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದೇ ಸಮಯದಲ್ಲಿ, ಉಮ್ರಾವನ್ನು ನಿರ್ವಹಿಸುವ ಜವಾಬ್ದಾರಿಯು ಅದಕ್ಕೆ ಭೌತಿಕ, ಆರ್ಥಿಕ ಸದೃಢತೆ ಹೊಂದಿರುವವರ ಮೇಲಿದೆ ಎನ್ನುವುದು ನಿಸ್ಸಂಶಯ. ಮಾತ್ರವಲ್ಲ ತಾನು ಉಮ್ರಾ ನಿರ್ವಹಿಸುವುದು ಜಗತ್ತಿಗೆ ತೋರ್ಪಡಿಸಲೋಸ್ಕರ ಅಲ್ಲ , ಅದು ಕೇವಲ ಅಲ್ಲಾಹನ ಸಂತೃಪ್ತಿಗಾಗಿ ಮಾತ್ರ ಎನ್ನುವ ಜ್ಞಾನ ನಮ್ಮಲ್ಲಿರುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ, ಕೆಲವರು ಕೇವಲ ಭೌತಿಕ ಉದ್ದೇಶದಿಂದ ಮಾತ್ರ ಉಮ್ರಾಗೆ ತಯಾರಿ ನಡೆಸುತ್ತಿದ್ದಾರೆ, ಇದು ಇಡೀ ವಿಶ್ವಾಸಿಗಳು ಮತ್ತು ಕೆಲವು ಧಾರ್ಮಿಕ ಸಂಸ್ಥೆಗಳ ಸ್ಥಗಿತಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿನ ವರದಿಗಳು ಇದಕ್ಕೆ ಸಾಕ್ಷಿಯಾಗಿದೆ. ಅನೇಕರು ಉಮ್ರಾಗೆ ಹೋಗುವ ಹೆಸರಿನಲ್ಲಿ ಕೆಲವು ಚಿನ್ನದ ಲಾಬಿಗಳ ಮದ್ಯವರ್ತಿಗಳಾಗಿ ಪ್ರಯಾಣಿಸಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ಕೆಲವು ಏಜೆಂಟರು ಆರ್ಥಿಕವಾಗಿ ಹಿಂದುಳಿದ ಕೆಲವರನ್ನು ಕ್ಯಾನ್ವಾಸ್ ಮಾಡುವ ಮೂಲಕ ಮತ್ತು ಕಮಿಷನ್ ಮತ್ತು ಉಚಿತ ಉಮ್ರಾವನ್ನು ನೀಡುವ ಮೂಲಕ ತಮ್ಮ ಅಕ್ರಮ ಚಿನ್ನ ದಂಧೆಯ ವಾಹಕಗಳಾಗಿ ಪರಿವರ್ತಿಸುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ. ಅಲ್ಲಾಹನ ಸಂತ್ರಪ್ತಿಗಾಗಿ ಹಾಗೂ ಪ್ರವಾದಿ ಪೈಗಂಬರರ ಸನ್ನಿಧಿಯ ಸಂದರ್ಶನವೆಂಬ ಹೆಸರಿನಲ್ಲಿ ಬರುವ ಪವಿತ್ರ ಉಮ್ರಾ ಕರ್ಮವನ್ನು ಅವಮಾನಿಸುವ ಈ ಚಿನ್ನದ ಉಮ್ರಾವನ್ನು ತಿರಸ್ಕರಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ.
ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಇಂತಹ ಕಳ್ಳ ದಂಧೆಯ ಗ್ಯಾಂಗ್ ಕಾರ್ಯಾಚರಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡವರೇ ಇವರ ಟಾರ್ಗೆಟ್. ಫ್ರೀ ಉಮ್ರಾ ಎಂದು ಬೈನ್ ವಾಷ್ ಮಾಡಿ ಮಕ್ಕಾ ಮದೀನಾ ಸಂದರ್ಶಿಸಿ ಹಿಂದಿರುಗುವಾಗ ಇವರ ಕೈಯಲ್ಲಿ ಲಗೇಜ್ ಕೊಟ್ಟು ಕಳುಹಿಸುವ ಈ ಗ್ಯಾಂಗ್ ನ ವಂಚನೆಯು ಇಂತಹ ಅಮಾಯಕರಿಗೆ ತಿಳಿದಿರುವುದಿಲ್ಲ. ಹೀಗೆ ತಮಗರಿವಿಲ್ಲದ ಅಕ್ರಮ ಚಿನ್ನ ಸಾಗಾಟದಡಿಯಲ್ಲಿ ಕಸ್ಟಂಸ್ ಅಧಿಕಾರಿಗಳಿಂದ ಬಂಧಿತರಾಗಿ ಕಂಬಿ ಎಣಿಸುತ್ತಿರುವ ಅದೆಷ್ಟೊ ಅಮಾಯಕರು ತಾವು ಮಾಡದ ತಪ್ಪಿಗೆ ಜೈಲಲ್ಲಿದ್ದಾರೆ. ಆದುದರಿಂದ ತಮ್ಮ ಪರಿಚಿತರಲ್ಲಿ ಯಾರಾದರೂ ಇಂತಹ ಚಿನ್ನ ದಂಧೆಯವರ ವಾಹಕಗಳಾಗಿ ಉಮ್ರಾಗೆ ಹೋಗಲು ಯೋಜಿಸುತ್ತಿದ್ದರೆ, ನಾವು ಅವರನ್ನು ಕಿವಿಮಾತಿನ ಮೂಲಕ ಇಂತಹ ಅಪಾಯಕ್ಕೆ ಕೈಹಾಕದಂತೆ ತಡೆಯಬೇಕಿದೆ. ಹಾಗೂ ಅಂತಹ ಪ್ರಯಾಣಗಳ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಾಗಿದೆ.
ಚಿನ್ನದ ವಾಹಕಗಳಾಗಿ ನಾವು ನಿರ್ವಹಿಸುವ ಉಮ್ರಾ ಎಂದಿಗೂ ಸ್ವೀಕಾರಾರ್ಹ ಉಮ್ರಾ ಆಗಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅದೇ ಸಮಯದಲ್ಲಿ, ನಮ್ಮ ಕಾರ್ಯಗಳು ನಾವು ಅಧ್ಯಯನ ಮಾಡಿದ ಧರ್ಮ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಅಪಖ್ಯಾತಿ ಉಂಟುಮಾಡುತ್ತಿವೆ ಎಂಬುದನ್ನು ಗಮನದಲ್ಲಿಡಬೇಕಿದೆ.
-ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.