(www.vknews.in) : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಜನನಾಯಕಿ,ಬಡವರ ಭಂದು ಡಾ.ಸುಮತಿ ಎಸ್ ಹೆಗ್ಡೆಯವರ ಹೆಸರು ಜೆಡಿಎಸ್ ಎರಡನೇ ಹಂತದ ಪಟ್ಟಿಯಲ್ಲೇ ಅಂತಿಮವಾಗಿದ್ದು ಬಹುಷ ಎರಡು ದಿನಗಳಲ್ಲಿ ಘೋಷನೆಯಾಗಲಿವೆ. ಹಾಸನದ ಅಭ್ಯರ್ಥಿಗಳ ಗೊಂದಳದ ವಿಚಾರವಾಗಿ ಚರ್ಚೆಯಲ್ಲಿರುವ ಕಾರಣ ಜೆಡಿಎಸ್ ಎರಡನೇ ಹಂತದ ಪಟ್ಟಿಯ ಹೆಸರುಗಳ ಘೋಷಣೆಯು ವಿಳಂಬವಾಗಿದ್ದು , ಮಂಗಳೂರಿನ ಸುಮತಿ ಎಸ್ ಹೆಗ್ಡೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿರುತ್ತಿರುವುದು , ಆದಷ್ಟು ಶೀಘ್ರವಾಗಿ ಡಾ.ಸುಮತಿ ಎಸ್ ಹೆಗ್ಡೆಯವರ ಹೆಸರು ಘೊಷಣೆಯಾಗುವುದನ್ನು ಕಾತರದಿಂದ ಕಾಯುತ್ತಿದ್ದಾರೆ.
ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮವಾಗಿದ್ದು ಈ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು ಗುಟ್ಟಾಗಿ ಉಳಿದಿಲ್ಲ. ಬಹುತೇಕ ಬಿಜೆಪಿಯ ಮತಗಳನ್ನು ಸೆಳೆಯಲು ಸಾಧ್ಯವಿರುವ ಜನನಾಯಕಿ ಡಾ.ಸುಮತಿ ಎಸ್ ಹೆಗ್ಡೆಯವರಿಗೆ ಅಲ್ಪಸಂಖ್ಯಾತ ಕ್ರೈಸ್ತ ಹಾಗೂ ಮುಸ್ಲಿಮರ ಮತಗಳೂ ಶೇ 80 ಕ್ಕಿಂತಲೂ ಹೆಚ್ಚು ಬೀಳುವುದು ನಿಚ್ಚಲವಾಗಿರುವುದು ಖಂಡಿತವಾಗಿಯೂ ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಮೊದಲ ಬಾರಿಗೆ ಜೆಡಿಎಸ್ ಖಾತೆ ತೆರೆಯುವ ಮುನ್ಸೂಚನೆ ನೀಡಿದೆ. ಡಾ.ಸುಮತಿ ಎಸ್ ಹೆಗ್ಡೆಯವರು ಮಹಿಳಾ ಅಭ್ಯರ್ಥಿಯಾಗಿರುವ ಕಾರಣ ಎಲ್ಲಾ ಸಮಾಜದ ಮಹಿಳೆಯರ ಮತಗಳ ಸಾಕಷ್ಟು ಪ್ರಮಾಣದಲ್ಲಿ ಲಭಿಸುವುದು ಎಂದು ಚುನಾವಣಾ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಅದಲ್ಲದೇ ಇವರು ಸುಮಾರು ನಾಲ್ಕು ವರುಷಗಳಿಂದ ಈ ಕ್ಷೇತ್ರದ ಜನಸೇವೆ ಮಾಡಿದ್ದು ಜನರೊಂದಿಗೆ ಆತ್ಮೀಯವಾಗಿ ಬೆರೆತಿದ್ದು , ಎಲ್ಲಾ ಸಮಾಜದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಬಹಳಷ್ಟು ಜನರ ಸಮಸ್ಯೆಗಳನ್ನು ಇತ್ಯರ್ತಪಡಿಸಿದ್ದಾರೆ. ಇವರು ಈ ಕ್ಷೇತ್ರದ ಅಧ್ಯಕ್ಷೆಯಾದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಜೆಡಿಎಸ್ ಸೇರಿದ್ದು , ಪಕ್ಷ ಸಂಘಟನೆಯಲ್ಲಿ ಸೈ ಎನಿಸಿಕೊಂಡಿದ್ದು , ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಕುಮಾರಣ್ಣರ ಕನಸಿನ ಜನಪರ ಯೋಜನೆಗಳಾದ ಜನತಾ ಜಲಧಾರೆ ಹಾಗೂ ಪಂಚರತ್ನ ದ ಬಗ್ಗೆ ಮಂಗಳೂರಿಗರಿಗೆ ವಾಹನ ಜಾಥಾ ಮೂಲಕ ಪರಿಚಯಿಸಿದ್ದು ರಾಜ್ಯ ಜೆಡಿಎಸ್ ನಾಯಕರ ಮನವೊಲಿಸಿದೆ. ಇದೆಲ್ಲಾ ಕಾರಣಗಳು ಜೆಡಿಎಸ್ ಪಕ್ಷವನ್ನು ಮಂಗಳೂರಿನಲ್ಲಿ ಬೆಳೆಯಲು ಸುಮತಿ ಎಸ್ ಹೆಗ್ಡೆಯವರ ಕೊಡುಗೆಯು ಅಪಾರ ಹಾಗೂ ಆನೆಪಾಲು ಎಂದೇ ಹೇಳಬಹುದು.
ಒಟ್ಟಿನಲ್ಲಿ ಅಜಾತ ಶತ್ರು ಎಂಬಂತೆ ಕಂಗೊಳಿಸಿತ್ತಿರುವ ಇವರ ಹೆಸರು ಎರಡನೇ ಹಂತದಲ್ಲಿ ಬಿಡುಗಡೆಯಾಗಲಿ ಎಂದು ಡಾ.ಸುಮತಿ ಎಸ್ ಹೆಗ್ಡೆಯವರ ಅಭಿಮಾನಿಗಳ ಕಳಕಲೀಯ ಬೇಡಿಕೆ.
ಕರುನಾಡಿಗೆ ಕುಮಾರಣ್ಣ ತುಳುನಾಡಿಗೆ ಸುಮತಿ ಅಕ್ಕ
— ಅಶೋಕ ಪೂಜಾರಿ ಮಂಗಳೂರು, ಜೆಡಿಎಸ್ ಕಾರ್ಯಕರ್ತ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.