(www.vknews.in) ; ಸರಕಾರಿ ಶಾಲೆಗಳಲ್ಲಿ ಸಂವಿಧಾನಾತ್ಮಕವಾಗಿ ಪೋಷಕರಿಂದ ಆಯ್ಕೆ ಆಗುವಂತಹ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರೊಂದಿಗೆ ಸಂವಹನ ಮಾಡಲು ಶಿಕ್ಷಣ ಇಲಾಖೆಯು ವಾರ್ಷಿಕವಾಗಿ ಎರಡು ಬಾರಿ ಸಮುದಾಯದತ್ತ ಕಾರ್ಯಕ್ರಮವನ್ನು ಮಾಡಲು ಆದೇಶವನ್ನು ವಾರ್ಷಿಕವಾಗಿ ಹೊರಡಿಸುತ್ತಾ ಬಂದಿದೆ.
ಈ ಶೈಕ್ಷಣಿಕ ವರ್ಷದ ಕೊನೆಯ ಸಮುದಾಯದತ್ತ ಕಾರ್ಯಕ್ರಮ ವನ್ನು ಏಪ್ರಿಲ್ 8 ಮತ್ತು 10 ತಾರೀಖಿನಂದು ನಡೆಸುವ ಬಗ್ಗೆ ಆದೇಶ ಇದ್ದು,ಹೆಚ್ಚಿನ ಎಲ್ಲಾ ಶಾಲೆಗಳಲ್ಲಿ ಎಸ್ಡಿಎಂಸಿ ಗಳು ಇದರ ಪೂರ್ವಭಾವಿ ಸಭೆಗಳನ್ನು ಕರೆದು ಶಾಲೆಯ ಆಗುಹೋಗುಗಳ ಬಗ್ಗೆ, ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ರೂಪುರೇಷೆ ತಯಾರಿಸುವ ಬಗ್ಗೆ ತೀರ್ಮಾನವನ್ನು ಮಾಡಲಾಗಿತ್ತು.
ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೂಡ ಸಮುದಾಯದತ್ತ ಕಾರ್ಯಕ್ರಮ ನಡೆದಿದ್ದು, ದುರಾದೃಷ್ಟವಶಾತ್ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಸರಕಾರಿ ಶಾಲೆಯ ಪೋಷಕರು ,ಶಾಲಾ ಆವರಣದಲ್ಲಿ ನಡೆಸುವ ಸಭೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿ ಕಂಡಿದ್ದು ಎಲ್ಲಾ ಮುಖ್ಯೋಪಾಧ್ಯಾಯರು ಗಳಿಗೆ ಮೌಖಿಕ ಆದೇಶವನ್ನು ನೀಡಿ ಸಭೆ ನಡೆಸದೆ ಇರಲು ಆಜ್ಞಾಪಿಸಿದ್ದಾರೆ.
ಇದರಿಂದ ಈ ದಿನ ಶಾಲೆಗಳಿಗೆ ಬಂದಂತಹ ಪೋಷಕರಿಂದ ಸಹಿಯನ್ನು ಸಂಗ್ರಹಿಸಿ ಯಾವುದೇ ಸಭೆ ನಡೆಸಲು ಮಕ್ಕಳ ಶೈಕ್ಷಣಿಕ ಹಾಗೂ ಶಾಲೆಯ ಬೌತಿಕ ಆವಶ್ಯಕತೆಯ ಬಗ್ಗೆ ಮಾತನಾಡಲು ಅವಕಾಶ ವನ್ನು ಕೊಡದೆ ಇರುವುದನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆಯು ಖಂಡಿಸುತ್ತಾ ಇದೆ.
ಶಾಲೆಯ ಆವರಣದ ಒಳಗೆ ಎಸ್ಡಿಎಂಸಿ ಶಿಕ್ಷಕರು ಮತ್ತು ಪೋಷಕರೊಂದಿಗೆ ಶಾಲೆಯ ಅಭಿವೃದ್ದಿ ,ಶಾಲೆಯ ದಾಖಲಾತಿ,ಶೈಕ್ಷಣಿಕ ಪ್ರಗತಿಗಳಿಗೆ ಪೂರಕವಾದ ಸಂವಹನ ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯ ವ್ಯಾಪ್ತಿಗೆ ಬರುವ ಬಗ್ಗೆ ಚುನಾವಣಾ ಅಧಿಕಾರಿಗಳು ಯಾವುದೇ ಆದೇಶವನ್ನು ಹೊರಡಿಸಿದೆ ಇರುವಾಗ, ಅದಲ್ಲದೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಮುದಾಯದತ್ತ ಕಾರ್ಯಕ್ರಮಕ್ಕೆ ಇಲ್ಲದ ಅಡಚಣೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಯಾಕೆ ? ಎನ್ನುವ ಪ್ರಶ್ನೆ ಹಾಗೂ ಸಂಶಯ ಮೂಡುತ್ತದೆ.
ಆದರಿಂದ ದಕ್ಷಿಣ ಕನ್ನಡದಲ್ಲಿ ಕೂಡ ಸಮುದಾಯದತ್ತ ಕಾರ್ಯಕ್ರಮ ವನ್ನು ಕೂಡಲೇ ಮಾಡಲು ಇಲಾಖೆಯು ಆದೇಶವನ್ನು ಹೊರಡಿಸಿ ಸರಕಾರಿ ಶಾಲೆಗಳ ಉಳಿಯುವಿಕೆ ಯಲ್ಲಿ ಪೋಷಕರ ಪಾತ್ರ ತುಂಬಾ ಇದ್ದು ಅವರೊಂದಿಗೆ ಶಾಲೆಯ ಹಾಗೂ ಶೈಕ್ಷಣಿಕ ವಿಷಯದಲ್ಲಿ ಚರ್ಚಿಸಲು ಅನುವು ಮಾಡಿ ಕೊಡಬೇಕಾಗಿ ಆಗ್ರಹಿಸುತ್ತಾ ಇದ್ದೇವೆ.
ಮೊಯಿದಿನ್ ಕುಟ್ಟಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.