(www.vknews.in) ; ಶಿವಮೊಗ್ಗ ವಿಧಾನ ಪರಿಷತ್ ಸದಸ್ಯ ಶ್ರೀ ಡಿ ಎಸ್ ಅರುಣ್ ಅವರು ತೀರ್ಥಹಳ್ಳಿ ತಾಲೂಕು ಆರಗ ಮಹಾಶಕ್ತಿ ಕೇಂದ್ರದ ಜಿಗುಳುಗೋಡು, ಆರಗ, ನೊಣಬೂರು ಗ್ರಾಮಗಳಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು. ಈ ಸಂಧರ್ಭದಲ್ಲಿ ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಪ್ರತಿಪಾದಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು, ಸ್ಥಳೀಯ ಶಾಸಕರ ಅಭಿವೃದ್ಧಿ ಯೋಜನೆಗಳು ತಿಳಿಸಿ ಪಕ್ಷದ ಪರವಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ ಎಸ್ ಅರುಣ್ ರವರು ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಗೃಹ ಸಚಿವರಾದ ಆರಗಜ್ಞಾನೇಂದ್ರ, ಮಧನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶರಧಿ ಪೂರ್ಣೆಶ್ ಹಾಗೂ ನಾಗರಾಜ್ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ, ಪ್ರೇಮ, ಸತೀಶ್, ಉಪಾಧ್ಯಕ್ಷರಾದ ಕವಿತಾ ಬಾಸ್ಕರ್, ಮಹಾಶಕ್ತಿ ಕೇಂದ್ರದ ಮಂಜಪ್ಪ, ಮಂಜುನಾಥ್, ಶ್ರೀನಿವಾಸ್ ಗೌಡ ಬೀಸುರಾಜು ಹಾಗೂ ಮುಖಂಡರು, ಸಾರ್ವಜನಿಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.