ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) ; ಮಾನವರು ನೇರವಾಗಿ ಗೋಮೂತ್ರ ಕುಡಿಯಬಾರದು. ಗೋಮೂತ್ರದಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾಗಳಿದ್ದು, ಅದನ್ನು ಕುಡಿಯುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಅಧ್ಯಯನ ವರದಿ ಹೇಳಿದೆ. ಉತ್ತರ ಪ್ರದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (IVRI) ಭೋಜ್ ರಾಜ್ ಸಿಂಗ್ ನೇತೃತ್ವದ ಅಧ್ಯಯನದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗೋಮೂತ್ರದಲ್ಲಿ ಇ.ಕೋಲಿ ಸೇರಿದಂತೆ 14 ಬಗೆಯ ಬ್ಯಾಕ್ಟೀರಿಯಾಗಳಿವೆ. IVRI ವರದಿಯ ಪ್ರಕಾರ, ಗೋಮೂತ್ರವನ್ನು ಮನುಷ್ಯರು ನೇರವಾಗಿ ಕುಡಿದರೆ ಗಂಭೀರವಾದ ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗಬಹುದು. ಎಮ್ಮೆ ಮೂತ್ರವು ಬ್ಯಾಕ್ಟೀರಿಯಾದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಂಡವು ಅಧ್ಯಯನ ವರದಿಯಲ್ಲಿ ಹೇಳಿದೆ.
ಗೋಮೂತ್ರ ಬ್ಯಾಕ್ಟೀರಿಯಾ ಮುಕ್ತ ಎಂಬ ನಂಬಿಕೆ ನಿರಾಧಾರ. ಗೋಮೂತ್ರವನ್ನು ಮನುಷ್ಯರು ಎಂದಿಗೂ ಬಳಸುವಂತಿಲ್ಲ. ಮಾನವ ಬಳಕೆಗೆ ಎಂದಿಗೂ ಶಿಫಾರಸು ಮಾಡಲಾಗುವುದಿಲ್ಲ ಎಂದು ಅಧ್ಯಯನ ಗುಂಪು ಹೇಳಿದೆ. ಶುದ್ಧೀಕರಿಸಿದ ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ಭೋಜ್ ರಾಜ್ ಹೇಳಿದ್ದಾರೆ.
ಜೂನ್ ನಿಂದ ನವೆಂಬರ್ 2022 ರವರೆಗೆ ಸ್ಥಳೀಯ ಡೈರಿ ಫಾರ್ಮ್ಗಳಲ್ಲಿ ಮೂರು ತಳಿಯ ಹಸುಗಳಿಂದ ಸಂಗ್ರಹಿಸಲಾದ ಮೂತ್ರದ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಾಹಿವಾಲ್, ಥಾರ್ಪಾರ್ಕರ್ ಮತ್ತು ವಿಂದ್ವಾನಿ ತಳಿಗಳ ಮೂತ್ರವನ್ನು ಪರೀಕ್ಷಿಸಲಾಯಿತು. IVRI ಸಂಶೋಧಕ ಭೋಜ್ ರಾಜ್ ಸಿಂಗ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳ ಗುಂಪು ಈ ಪ್ರಯೋಗವನ್ನು ನಡೆಸಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.