ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕಾರು ಕಳ್ಳತನ ಪ್ರಕರಣದ ಆರೋಪಿ ಕಾಸರಗೋಡು ಮೂಲದವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೊಟ್ಟೇಕಾರ್ ಮರದ ಗಿರಣಿ ಬಳಿ ನಿಲ್ಲಿಸಿದ್ದ ಪಿಕಪ್ ವ್ಯಾನ್ ಕದ್ದ ಪ್ರಕರಣದಲ್ಲಿ ಕಾಸರಗೋಡು ಮೂಲದ ಅಹ್ಮದ್ ರಂಜಾನ್ (26) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಜನವರಿ 3ರಂದು ಕಾರು ಕಳ್ಳತನ ನಡೆದಿತ್ತು. ವಾಹನದ ಮಾಲೀಕ ಮುಹಮ್ಮದ್ ಶರೀಫ್ ಉಳ್ಳಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಈತನ ವಿರುದ್ಧ ಕಾಸರಗೋಡು, ಬೆಳ್ತಂಗಡಿ, ಮಡಿಕೇರಿ, ಕುಂಪಲ ಠಾಣೆಗಳಲ್ಲಿ ಕಾರು ಕಳವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.