ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಚೌಕಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ನವವಿವಾಹಿತೆ ಸೇರಿದಂತೆ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. ಚೌಕಿ ಬ್ಲಾರ್ಕೋಟೆಯ 25 ವರ್ಷದ ಮಹಿಳೆ ಮತ್ತು ಚೌಕಿ ಅರ್ಜಾಲ್ ರಸ್ತೆಯ 25 ವರ್ಷದ ಮಹಿಳೆ ಕಾಣೆಯಾಗಿದ್ದಾರೆ.
ಬ್ಲಾರ್ಕೋಟ್ ಮಹಿಳೆ ಎಂಟು ತಿಂಗಳ ಹಿಂದೆ ವಿವಾಹವಾದರು. ಕಳೆದ ದಿನದಿಂದ ಮಹಿಳೆ ನಾಪತ್ತೆಯಾಗಿದ್ದಾರೆ. ಸಹೋದರ ಕೆ. ಅರ್ಷದ್ ನೀಡಿದ ದೂರಿನ ಮೇರೆಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರ್ಜಾಲ್ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮಹಿಳೆ ಮನೆಯಿಂದ ಹೊರ ಹೋಗಿದ್ದರು. ನಂತರ ಮರಳಿ ಬರಲಿಲ್ಲ. ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.