ಜೆದ್ದಾ(www.vknews.in): ಸೌದಿ ಅರೇಬಿಯಾವು ಮಾದಕ ದೃವ್ಯ ವ್ಯಸನ ಮುಕ್ತವಾಗುವ ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ‘ಡ್ರಗ್ಸ್ ಫ್ರೀ ಸೌದಿ ಅರೇಬಿಯಾ’ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಅಭಿಯಾನದಡಿಯಲ್ಲಿ ಶುಕ್ರವಾರ ಮಸೀದಿಗಳಲ್ಲಿ ಮಾದಕ ದೃವ್ಯಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲು ಕರೆ ನೀಡಲಾಗಿದೆ. <img ಈ ಅಭಿಯಾನದ ಅಂಗವಾಗಿ ಸೌದಿಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು, ಸೌದಿ ಪ್ರಜೆಗಳು ಹಾಗೂ ವಿದೇಶಿಗರ ವಾಸ ಸ್ಥಳ ಹಾಗೂ ವಾಹನಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ತಪಾಸಣೆ ವೇಳೆ ವ್ಯಕ್ತಿಗಳ ಬಳಿ ಗುಟ್ಕಾ ತಂಬಾಕು ಗಾತ್ ಮುಂತಾದ ಮಾದಕ ವಸ್ತುಗಳು ದೊರೆತರೆ ಅಂತಹ ವ್ಯಕ್ತಿಗಳನ್ನು ಬಾರೀ ದಂಡದೊಂದಿಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.