ಕರ್ನಾಟಕ ಮತ್ತು ಅದರಾಚೆಗಿನ ಇತ್ತೀಚಿನ ಸುದ್ದಿ ಮತ್ತು ನವೀಕರಣಗಳನ್ನು ನಮಗೆ ಹೊತ್ತು ತರುತ್ತಿರುವ ಮತ್ತು ತಾಯಿನಾಡಲ್ಲಿ ಇರುವ ಕನ್ನಡಿಗರಿಗೆ ಗಲ್ಫ್ ಕನ್ನಡಿಗರ ಚಟುವಟಿಕೆಗಳನ್ನು ತಲುಪಿಸುವಲ್ಲಿ ಕೊಂಡಿಯಾಗಿ ಮುಖ್ಯ ಕಾರ್ಯ ನಿರ್ವಹಿಸುತ್ತಿರುವ “ವಿಶ್ವ ಕನ್ನಡಿಗ ನ್ಯೂಸ್ ಮಾಧ್ಯಮ” -ಮಾಹಿತಿಯುಕ್ತ ಪತ್ರಿಕೋದ್ಯಮಕ್ಕಾಗಿ ನಮ್ಮ ವಿಶ್ವಾಸಾರ್ಹ ಮೂಲ.
13 ಯಶಸ್ವಿ ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅನಿವಾಸಿ ಕನ್ನಡಿಗರ ಅಚ್ಚುಮೆಚ್ಚಿನ ವಿಶ್ವ ಕನ್ನಡಿಗ ನ್ಯೂಸ್ ಮಾಧ್ಯಮಕ್ಕೆ ಹಾರ್ದಿಕ ಅಭಿನಂದನೆಗಳು! NRI ಕನ್ನಡ ಸಮುದಾಯಕ್ಕೆ ಸುದ್ದಿಯನ್ನು ಒದಗಿಸುವಲ್ಲಿ ವಿ ಕೆ ನ್ಯೂಸ್ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಿಜವಾಗಿಯೂ ಶ್ಲಾಘನೀಯ.
ದೇಶದ ಹಾಗು ವಿದೇಶದ ಕನ್ನಡಿಗ ಸಮುದಾಯದ ಇತ್ತೀಚಿನ ಘಟನೆಗಳ ಕುರಿತು ನಮಗೆ ಅಪ್ಡೇಟ್ ಮಾಡುವ , ಮತ್ತು ಎಲ್ಲಾ ಅನಿವಾಸಿ ಕನ್ನಡ ಕಾರ್ಯಕ್ರಮ ವರದಿಗಳನ್ನು ಹಂಚಿಕೊಳ್ಳಲು ವಿ ಕೆ ನ್ಯೂಸ್ ಮಾಧ್ಯಮ ತೆಗೆದುಕೊಳ್ಳುವ ಎಲ್ಲ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ.
ಪಕ್ಷಪಾತವಿಲ್ಲದ ಮತ್ತು ವಾಸ್ತವಿಕ ಸುದ್ದಿಗಳನ್ನು ಒದಗಿಸುವ ಇವರ ಬದ್ಧತೆಯು ಈ ನ್ಯೂಸ್ ಮಾಧ್ಯಮಕ್ಕೆ ನಿಷ್ಠಾವಂತ ಫ್ಯಾನ್ಸ್ ಫಾಲೋಯಿಂಗ್ ಅನ್ನು ಗಳಿಸಿ ಕೊಟ್ಟಿದೆ ಹಾಗು ನಾವು ಅದರ ಭಾಗವಾಗಿರಲು ಹೆಮ್ಮೆಪಡುತ್ತೇವೆ. ನಮ್ಮ ಎಲ್ಲ ಕನ್ನಡ ಪರ ಕಾರ್ಯಕ್ರಮಗಳ ವಿಶೇಷ ವರದಿಗಳನ್ನು ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ವಿಶ್ವದ ಎಲ್ಲ ಕನ್ನಡಿಗರಿಗೆ ತಲುಪಲು ವಿಕೆ ನ್ಯೂಸ್ ವಿಶೇಷ ಪಾತ್ರ ವಹಿಸುತ್ತಿದೆ.
ಈ ವಿಶೇಷ ಸಂದರ್ಭದಲ್ಲಿ, ವಿಕೆ ನ್ಯೂಸ್ ಅವರ ಉನ್ನತ ಭವಿಷ್ಯಕ್ಕಾಗಿ ನಾವು ಶುಭ ಹಾರೈಸುತ್ತೇವೆ. ತಾರತಮ್ಯವಿಲ್ಲದೆ ಅಸಾಧಾರಣ ಪತ್ರಿಕೋದ್ಯಮದಿಂದ ಇನ್ನು ಹೆಚ್ಚಿನ ಕನ್ನಡಿಗರನ್ನು ತಲುಪಲಿ ಹಾಗು ಈ ಮೂಲಕ ಕನ್ನಡ ತಾಯಿಯ ಸೇವೆಇವರಿಂದ ನಿರಂತರವಾಗಿ ಮುಂದುವರಿಯಲಿ . .
✍️ ಶ್ರೀಮತಿ ಮಮತಾ ಮೈಸೂರು ಮಾಜಿ ಅಧ್ಯಕ್ಷರು, ಹೆಮ್ಮೆಯ ದುಬೈ ಕನ್ನಡ ಸಂಘ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.