(www.vknews.in) : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಮಂಗಳೂರು ಕೇಂದ್ರ ಸಮಿತಿಯ 28ನೇ ವಾರ್ಷಿಕ ಮಹಾಸಭೆಯು ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಅಲ್ ಹಾಜ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ರವರ ಅನುಪಸ್ಥಿತಿಯಲ್ಲಿ ಅವರ ಸುಪುತ್ರ, ಡಿಕೆಯಸ್ಸಿ ಜಿಲ್ಲಾ ಸಮಿತಿ ಅಧ್ಯಕ್ಷರೂ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಕಾರ್ಯಾಧ್ಯಕ್ಷರೂ ಆದ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರ ಘನ ಅಧ್ಯಕ್ಷತೆಯಲ್ಲಿ ದಿನಾಂಕ 26, ಮೇ 2023 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಬಹಳ ಯಶಸ್ವಿಯಾಗಿ ಜರಗಿತು.
ಮುಹಮ್ಮದ್ ಝೈದ್ ಇಬ್ನ್ ಅಬ್ದುಲ್ ಖಾದರ್ ಕನ್ನಂಗಾರ್ ಪವಿತ್ರ ಖುರ್ಆನ್ ಪಠಿಸಿದರು. ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮಿಲನ್ ಸೂರಿಂಜೆಯವರು ಸಭೆಯಲ್ಲಿ ಹಾಜರಿದ್ದ ಸರ್ವ ಗಣ್ಯ ಸದಸ್ಯರನ್ನು ಆದರಣೀಯವಾಗಿ ಸ್ವಾಗತಿಸಿದರು. ಡಿಕೆಯಸ್ಸಿಯ ಕಾರ್ಯಕಲಾಪಗಳು ಹಾಗೂ ಕೆಲವೊಂದು ದೀನೀ ನಸೀಹತ್ ನೊಂದಿಗೆ ಅಲ್ಲಾಹನ ಪವಿತ್ರ ನಾಮದೊಂದಿಗೆ ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ತಂಙಳ್ ಉಚ್ಚಿಲರವರು ಸಮಾರಂಭವನ್ನು ಉದ್ಘಾಟಿಸಿದರು.
ವಾರ್ಷಿಕ ಪ್ರವರ್ತನಾ ವರದಿಯನ್ನು ಡಿಕೆಯಸ್ಸಿ ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜಮಾರ್ ಮಂಡಿಸಿದರು. 2021-23 ನೇ ಸಾಲಿನ ಪ್ರಗತಿ ವರದಿಯನ್ನು ಕೇಂದ್ರ ಸಮಿತಿ ಉಪಾಧ್ಯಕ್ಷ ಜನಾಬ್ ಕೆ.ಎಚ್.ಮುಹಮ್ಮದ್ ರಫೀಖ್ ಸೂರಿಂಜೆ ಸಭೆಯಲ್ಲಿ ಓದಿ ಹೇಳಿದರು. ಅಂಗೀಕೃತವಾದ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ಜನಾಬ್ ಮುಹಮ್ಮದ್ ಸೀದಿ ಹಾಜಿ ಕುಶಾಲನಗರರವರು ವಿವರಿಸಿದರು ಹಾಗೂ ನೂತನ ಸಂವಿಧಾನವನ್ನು ಕುಂಬೋಳ್ ಸಯ್ಯದ್ ಅಹ್ಮದ್ ಮುಕ್ತಾರ್ ತಂಙಳ್ ಹಾಗೂ ಸರ್ವ ಸಭಿಕರ ಅಂಗೀಕಾರದೊಂದಿಗೆ ಬಿಡುಗಡೆಗೊಳಿಸಲಾಯಿತು.
ಮರ್ಕಝ್ ಸಮಿತಿಯ ವರದಿಯನ್ನು ಕೇಂದ್ರ ಸಮಿತಿ ಕಾರ್ಯದರ್ಶಿ ಜನಾಬ್ ಅಬೂಬಕ್ಕರ್ ಬರ್ವ ಹಾಗೂ ಡಿಕೆಯಸ್ಸಿ ಜಿಲ್ಲಾ ಸಮಿತಿಯ ವರದಿಯನ್ನು ಕಾರ್ಯದರ್ಶಿ ಜನಾಬ್ ಅಬ್ದುಲ್ ಗಪೂರ್ ಸಜಿಪ ಓದಿ ಹೇಳಿದರು. ಚುನಾವಣಾಧಿಕಾರಿಗಳಾಗಿ ಮರ್ಕಝ್ ಸಮಿತಿ ಉಪಾಧ್ಯಕ್ಷ ಹಾಜಿ ಇಸ್ಮಾಯೀಲ್ ಕಿನ್ಯ ಹಾಗೂ ಕೋಶಾಧಿಕಾರಿ ಅಬ್ದುಲ್ ಹಮೀದ್ ಸುಳ್ಯರವರ ನೇತೃತ್ವದಲ್ಲಿ 2023-25 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಅಲ್ ಹಾಜ್ ಅಸ್ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಲ್ (ಅಧ್ಯಕ್ಷರು) ಮುಹಮ್ಮದ್ ಸೀದಿ ಹಾಜಿ ಕುಶಾಲನಗರ ( ಕಾರ್ಯಾಧ್ಯಕ್ಷರು) ಅಬ್ದುಲ್ ಅಝೀಝ್ ಆತೂರು (ಪ್ರಧಾನ ಕಾರ್ಯದರ್ಶಿ) ದಾವೂದ್ ಹಾಜಿ ಕಜೆಮಾರ್ (ಫೈನಾನ್ಸ್ ಸೆಕ್ರೆಟರಿ)
ಸಂವಹಣಾ ಕಾರ್ಯದರ್ಶಿಗಳು:- 1. ಕೆ.ಎಚ್.ಮುಹಮ್ಮದ್ ರಫೀಖ್ ಸೂರಿಂಜೆ 2. ಯೂಸುಫ್ ಅರ್ಲಪದವು ಉಪಾಧ್ಯಕ್ಷರುಗಳು:- 1. ಹಾತಿಂ ಕೂಳೂರು 2. ಶರೀಫ್ ಮರವೂರು 3. ಇಖ್ಬಾಲ್ ಕಣ್ಣಂಗಾರ್ 4. ಇಸ್ಮಾಯೀಲ್ ಕಣ್ಣಂಗಾರ್
ಕಾರ್ಯದರ್ಶಿಗಳು:- 1. ಮುಹಮ್ಮದ್ ಹಸನ್ ಮೂಡುತೋಟ 2. ಅಬೂಬಕ್ಕರ್ ಬರ್ವ 3. ಅಬ್ದುಲ್ ಮಜೀದ್ ಕಣ್ಣಂಗಾರ್ 4. ಅಬ್ದುಲ್ ಖಾದರ್ ಕಣ್ಣಂಗಾರ್ ಸಹಾಯಕ ಫೈನಾನ್ಸ್ ಸೆಕ್ರೆಟರಿ:- 1. ಮುಹಮ್ಮದ್ ರೋಯಲ್ ಮುಕ್ವೆ ಮೀಡಿಯ 1. ಅಬ್ದುಲ್ ಗಫೂರ್ ಸಜಿಪ 2. ಇಸ್ಮಾಯೀಲ್ ಕಾಟಿಪಳ್ಳ 3. ಇಬ್ರಾಹೀಂ ಕಣ್ಣಂಗಾರ್
ಕನ್ವಿನರ್:- 1. ಅಬ್ದುಲ್ಲತೀಫ್ ಮುಲರಪಟ್ನ 2. ಅಬ್ದುಲ್ ಅಝೀಝ್ ಮೂಳೂರು 3. ಇಮ್ತಿಯಾಝ್ ಕುಂದಾಪುರ 4. ಉಸ್ಮಾನ್ ಹೊಸಂಗಡಿ 5. ಯೂಸುಫ್ ಕಳಂಜಿಬೈಲ್ 6. ಮೋನಬ್ಬ ಅಬ್ದುರ್ರಹ್ಮಾನ್ ಎರ್ಮಾಳ್
ಲೆಕ್ಕ ಪರಿಶೋಧಕರು:- 1. ಇಸ್ಮಾಯೀಲ್ ಹೊಸಂಗಡಿ 2. ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಸಲಹಾ ಸಮಿತಿ:- 1. ಸುಲೈಮಾನ್ ಮಿಲನ್ ಸೂರಿಂಜೆ 2.ಅಬ್ದುಲ್ ಹಮೀದ್ ಉಳ್ಳಾಲ 3.ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ 4. ಅಬ್ದುಲ್ಲಾ ಉಂಞ ಉಚ್ಚಿಲ
ಮುಹಮ್ಮದ್ ಸೀದಿ ಹಾಜಿ ಮತ್ತು ಅಬ್ದುಲ್ಲತೀಫ್ ಮುಲರಪಟ್ನ ಸಭೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಯ್ಯಿದ್ ಮುಖ್ತಾರ್ ತಂಙಳ್ ಡಿಕೆಯಸ್ಸಿಯ ಅಭಿವೃದ್ಧಿಗಾಗಿ ತಾವುಗಳೆಲ್ಲರ ಇಖ್ಲಾಸ್ ಹಾಗೂ ತಖ್ವಾದೊಂದಿಗಿನ ಶ್ರಮ ನಿರಂತರವಾಗಿರಲಿ ಹಾಗೂ ಇಹ-ಪರ ವಿಜಯಕ್ಕೆ ಸಾಕ್ಷಿಯಾಗಲಿ ಎಂದು ಪ್ರಾರ್ಥಿಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಹಮ್ಮದ್ ಸೀದಿ ಹಾಜಿ ಡಿಕೆಯಸ್ಸಿ ಹಾಗೂ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಉನ್ನತಿಗೆ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ವಿನಂತಿಸಿದರು. ಸಮಾರಂಭದ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು ಧನ್ಯವಾದಗೈದರು ಹಾಗೂ ಸ್ವಲಾತುನ್ನಬಿ (ಸ) ಯೊಂದಿಗೆ ಸಭೆ ಮುಕ್ತಾಯ ಗೊಂಡಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.