ಬೆಂಗಳೂರು (www.vknews.in) : ಯುವತಿಯೋರ್ವಳು ಹೆತ್ತ ತಾಯಿಯನ್ನೇ ಕೊಂದು ಶವವನ್ನು ಸೂಟ್ ಕೇಸಿನಲ್ಲಿ ತುಂಬಿ ಮೈಕೋಲೇಔಟ್ ಠಾಣೆಗೆ ತಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅತ್ತೆ ಹಾಗು ತಾಯಿ ನಡುವಿನ ಜಗಳದಿಂದ ಬೇಸತ್ತು ತಾನು ಈ ಕೃತ್ಯ ಎಸಗಿದ್ದಾಗಿ ಯುವತಿ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾಳೆ. ಕೊಲೆ ಮಾಡಿದ ಆರೋಪಿ ಸೋನಾಲಿ ಸೇನ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ.
ಸೋನಾಲಿ ಸೇನ್ ಕಳೆದ ಆರು ವರ್ಷಗಳಿಂದ ಬಿಳೆಕಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಪತಿ, ಮಗ, ಅತ್ತೆ ಹಾಗೂ ತಾಯಿಯೊಂದಿಗೆ ವಾಸವಿದ್ದರು. ತಾಯಿ ಹಾಗೂ ಅತ್ತೆಯ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು, ಈ ವೇಳೆ ತಾಯಿ ನಾನು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು, ತಾಯಿಯೇ ನನ್ನ ಬಳಿ ಬಂದು ನನ್ನನ್ನು ಸಾಯಿಸು ಎಂದು ಹೇಳಿದ್ದರು, ನಾನು ನಿನ್ನ ತಂದೆ ಬಳಿ ಹೋಗಬೇಕು, ಹೀಗಾಗಿ ನನ್ನನ್ನು ಸಾಯಿಸು ಎಂದಿದ್ದರು, ಹೀಗಾಗಿ ನಾನು ಅವರನ್ನು ಸಾಯಿಸಿದೆ ಎಂದು ಆರೋಪಿ ಸೋನಾಲಿ ಸೇನ್ ಪೊಲೀಸರ ಮುಂದೆ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.