(www.vknews.in) ; ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರದ ಮಹಾತ್ವಕಾಂಕ್ಷಿ ಮಹಿಳಾ ಬಸ್ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಚಾಲನೆಯ ಸಂಭ್ರಮಾಚರಣೆಯನ್ನು ಮಂಗಳೂರು ಕ್ಷೇತ್ರದ ಇರಾ ಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಗ್ನೇಸ್ ಡಿ ಸೋಜಾ ಯೋಜನೆಯ ಬಗ್ಗೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷರಾದ ಮೊಯಿದಿನ್ ಕುಂಞಿ, ಸದಸ್ಯರಾದ ಎಂ ಬಿ ಉಮ್ಮರ್ ಯೋಜನೆಯ ಮಾಹಿತಿಯನ್ನು ನೀಡಿದರು. ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶ್ರಫ್ ಸಂಪಿಲ, ಸ್ಥಳೀಯ ಗಣ್ಯರಾದ ಎಸ್ ಎ ಅಬ್ದುಲ್ಲ,ಇಬ್ರಾಹಿಂ ಹಾಜಿ, ಸುಧಾನಂದ, ಅಬೂಬಕ್ಕರ್ ಮೂಲೆ, ಸಿಸಿಲಿಯಾ, ಮೊಯಿದಿನ್ ಕುಂಞಿ ಪರಪ್ಪು ಇನ್ನಿತರರು ಪಾಲ್ಗೊಂಡಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.