(www.vknews.in) ; ಕರ್ನಾಟಕ ರಾಜ್ಯದ ಭಾಗ್ಯಗಳ ಸರದಾರ ಸಿದ್ದರಾಮಯ್ಯ -ಡಿಕೆಶಿ ನೇತೃತ್ವದ ಕಾಂಗ್ರೆಸ್ ಘನ ಸರಕಾರದ ಮಹತ್ತರವಾದ ಯೋಜನೆಯಾದ “ಶಕ್ತಿ”ಯೋಜನೆ ಮಹಿಳೆಯರಿಗೆ ಗೌರವಪೂರ್ವಕವಾಗಿ ಯಾವುದೇ ವಯೋಮಿತಿ ಇಲ್ಲದೆ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ಅವಕಾಶ ನೀಡಿದ ಯೋಜನೆಗೆ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ವಾರ್ಡಿನ ದೇವಸ್ಯ ಜಂಕ್ಷನ್ ನಲ್ಲಿ ಇಂದು ಚಾಲನೆ ನೀಡಲಾಯಿತು.ಹಾಗೂ ಕಾಂಗ್ರೆಸ್ ತಾಳಿತ್ತನೂಜಿ ನಾರ್ಶ ಬೂತ್ ವತಿಯಿಂದ ಸರಕಾರಕ್ಕೆ ಜೈಕಾರ ಕೂಗಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಲಾಯಿತು..
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಅಸ್ಮ ಹಸೈನಾರ್, ಮಾಜಿ ಗ್ರಾ.ಪಂಚಾಯತ್ ಸದಸ್ಯರಾದ ಯೂಸುಫ್. ಟಿ,ಸಂಕಪ್ಪ ಗೌಡ ತಾಳಿತ್ತನೂಜಿ, ಗಂಗಾಧರ ಚೌಟ,ಹಸೈನಾರ್ ತಾಳಿತ್ತನೂಜಿ, ಅಬ್ದುಲ್ ರಹಿಮಾನ್ ಕುಲ್ಯಾರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಮಹಿಳಾ ನಾಗರೀಕರು,ಸರಕಾರಿ ಬಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.