(www.vknews.in) : ಅಲ್ ಮದ್ರಸತುಲ್ ಬದ್ರಿಯ ಶಾಂತಿಗುಡ್ಡೆ ಬಜ್ಪೆ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಸ್ಥಾಪಕ ದಿನವನ್ನು ದಿನಾಂಕ 26 ಜೂನ್ 2023 ಸೋಮವಾರ ಬೆಳಗ್ಗೆ 7:00 ಕ್ಕೆ ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ದುಆಃ ದ ಮೂಲಕ ಪ್ರಾರಂಭಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು BJM ಶಾಂತಿಗುಡ್ಡೆ ಪ್ರಧಾನ ಕಾರ್ಯದರ್ಶಿಯಾದ ಮುಸ್ತಫಾ ವಹಿಸಿದರು. ಮಾಜಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ರವರು ದ್ವಜರೋಹಣ ನೆರವೇರಿಸಿದರು. ಕೊಂಚಾರು ಮದ್ರಸದ ಸದರ್ ಮುಅಲ್ಲಿಂ ಮುನೀರ್ ಫೈಝಿ ಉಸ್ತಾದರು ಸ್ವಾಗತಿಸಿದರು.
ಸಮಸ್ತ ಸಾಗಿ ಬಂದ ಹಾದಿ ಮತ್ತು ಮುಂದಿನ ಯೋಜನೆಗಳ” ಕುರಿತು ಚುಟುಕಾಗಿ ಸ್ಥಳೀಯ ಖತೀಬರಾದ ಲುಖ್ಮಾನುಲ್ ಹಕೀಂ ಫೈಝಿ ಅಲ್ ಮಅ್’ಬರಿ ವಿಷಯ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಬದ್ರುದ್ದೀನ್, ಅಬ್ದುಲಾ ಸಲಾಂ ಮತ್ತು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ, ಮೂರು ಸ್ವಲಾತ್ ನೊಂದಿಗೆ ಮುಕ್ತಾಯಗೊಳಿಸಲಾಯಿತು.
SKSBV ಶಾಂತಿಗುಡ್ಡೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.