(www.vknews.in) : ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆಯ ನವಿಲೆಹಾಳ್ ಗ್ರಾಮದಲ್ಲಿ 24-06-2023 ರಂದು (3:10) 3ಎಕರೆ 10ಗುಂಟೆ ಜಮೀನಿನಲ್ಲಿ ಕೆರನ್ ಮಾರ್ಗದರ್ಶನದಲ್ಲಿ ಈ ವರ್ಷ ಬರೋಬ್ಬರಿ 117.5 ಕ್ವಿಂಟಲ್ ಭತ್ತವನ್ನು ಬೆಳೆದಿರುವುದರಿಂದ ಕೆರನ್ ಕಂಪನಿಯವರು ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು.
ಕಣದಮನೆ ಖಾಜಾಹುಸ್ಸೇನ್ ಮತ್ತು ಅವರ ಪತ್ನಿ ಆಶಾಬೀ, ಮೂರು ವರ್ಷದ ಹಿಂದೆ ಕೆರನ್ ಕಂಪನಿಯ ಒಂದು ರೈತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಕೆರನ್ ಮಾರ್ಗದರ್ಶನದಲ್ಲಿ ತಮ್ಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಬರೀ ಬೆಳೆ ಬೆಳೆಯುವ ಬಗ್ಗೆ ಮಾತ್ರ ಮಾಹಿತಿ ಅನ್ನಬೇಡಿ ಇಲ್ಲಿ ಭೂಮಿಯನ್ನು ಕಾಪಾಡಿಕೊಳ್ಳುವ ಬಗ್ಗೆ, ನೀರಿನ ಬಗ್ಗೆ, ಇಳುವರಿ ಬಗ್ಗೆ ಮುಂದಿನ ಪೀಳಿಗೆಗೆ ಒಳ್ಳೆಯ ಆಹಾರದ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ ಆಸಕ್ತಿಗೊಂಡ ದಂಪತಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಭತ್ತದಲ್ಲಿ ಒಳ್ಳೆಯ ಇಳುವರಿ ತೆಗೆದುಕೊಂಡಿದ್ದಾರೆ. ಮೊದಲು 75-80 ಕ್ವಿಂಟಲ್ ಭತ್ತವನ್ನು ತಮ್ಮ 3-10 ಗುಂಟೆಯಲ್ಲಿ ಬೆಳೆಯುತ್ತಿದ್ದು, ಕೆರನ್ ಮಾರ್ಗದರ್ಶನದ ನಂತರ ಮೊದಲ ವರ್ಷವೇ 90 ಕ್ವಿಂಟಲ್ ಮತ್ತು 2 ನೇ ವರ್ಷಕ್ಕೆ 98 ಕ್ವಿಂಟಲ್ ಮತ್ತು ಈ ವರ್ಷ ಬರೋಬ್ಬರಿ 117.5 ಕ್ವಿಂಟಲ್ ಭತ್ತವನ್ನು ಬೆಳೆದಿರುತ್ತಾರೆ.
ಅಲ್ಲದೇ ಪ್ರತೀ ವರ್ಷವೂ ಇವರ ಭತ್ತದ ಗುಣಮಟ್ಟ ರಫ್ತು ಸಾಗಿಸುವಷ್ಟು ಉತ್ತಮವಾಗಿದೆ. ಅದಕ್ಕಾಗಿಯೇ ಈ ವರ್ಷದಿಂದ ಅವರು ರಫ್ತು ಮಾಡುವ ಸಲುವಾಗಿ SONA ತಳಿಯನ್ನು ಮಾಡುತ್ತಿದ್ದಾರೆ. ಕೆರನ್ ಕಂಪನಿಗೆ ಬಂದ ಈ ದಂಪತಿಗಳು ಹಲವಾರು ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಇಳುವರಿ ಹೆಚ್ಚಿಸಿಕೊಂಡಿರುವುದಲ್ಲದೇ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಅಲ್ಲದೇ ದಿಯಾ ಎಂಟರ್ಪ್ರೈಸಸ್ ಮೂಲಕ ಬಿಜಾಪುರ, ಶಿರಶಿ, ಭರಮಸಾಗರ, ಜಗಳೂರು, ಬಿದರಕೆರೆ, ಶ್ಯಾಮನೂರು, ಮಲೇಬೆನ್ನೂರು, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ರೈತರಿಗೆ ಮಾಹಿತಿ ಮಾಡುತ್ತಾ ಇದರೊಂದಿಗೆ ಪ್ರತೀ ತಿಂಗಳು 15,000 ವರೆಗೆ ಆದಾಯವನ್ನು ಪಡೆಯುತ್ತಿದ್ದಾರೆ.
ಇದೇ ವರ್ಷ 9 ಲಕ್ಷದ WAGON-R ಕಾರನ್ನು ಪಡೆದ ಈ ದಂಪತಿಗಳ ಹರ್ಷ ಕಂಪನಿಯಲ್ಲಿ ಇರುವವರೆಲ್ಲರಿಗೂ ಮಾದರಿ ಎನಿಸಿದೆ. ಇದರೊಂದಿಗೆ ಒಂದೆರಡು ಹಸುವನ್ನು ಸಾಕಿದ್ದರೂ ಕೂಡ ಪ್ರತಿ ವರ್ಷ 3 TRACTOR ಲೋಡ್ ಉತ್ಕ್ರಷ್ಠ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಅಲ್ಲದೇ WDC,ಗೋಕೃಪಾಮೃತಜಲ,ಜೀವಾಮೃತ,ಪಂಚಗವ್ಯ-ದಶಗವ್ಯ, ಪೋಶಕಾಂಶದ್ರವ್ಯ, ಕುಣಪಜಲಗಳನ್ನು ಮಾಡಿ ಭೂಮಿಗೆ ಉಣಬಡಿಸುತ್ತಿದ್ದಾರೆ. 2 ವರ್ಷದ ಇವರ ಅಡಿಕೆ ಸಸಿಗಳನ್ನು ನೋಡಲು ತುಂಬಾ ಚೆನ್ನಾಗಿದೆ. 4 ನೇ ವರ್ಷಕ್ಕೆ ಫಸಲು ಪಡೆಯುವ ಬಗ್ಗೆ ಕಾರ್ಯಯೋಜನೆ ಮಾಡಿದ್ದಾರೆ.
ಖಾಜಾಹುಸ್ಸೇನ್ ಅವರ ಪತ್ನಿ ತಮ್ಮ ಗಂಡನ ಈ ಅಭಿವೃದ್ಧಿ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ. ಖಾಜಾಹುಸ್ಸೇನ್ ಅವರು ತಮ್ಮ ಪತ್ನಿಯ ಸಹಕಾರದ ಬಗ್ಗೆ ಕಂಪನಿಯ ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿದ್ದು ಉಳಿದ ಹೆಣ್ಣುಮಕ್ಕಳಿಗೆ ಸ್ಫೂರ್ಥಿದಾಯಕವಾಗಿದೆ. ಖಾಜಾಹುಸ್ಸೇನ್ ಅವರ ಗೆಳೆಯರು ಅವರ ಈ ಅಭಿವೃದ್ಧಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ. ಕಾರನ್ನು ತಂದ ನಂತರ ಅವರ ವ್ಯವಹಾರವು ಇನ್ನೂ ಚೆನ್ನಾಗಿ ನಡೆಯುತ್ತಿದೆ. ಜೊತೆಗೆ ಭತ್ತದಲ್ಲಿ ಈ ವರ್ಷ ಇನ್ನೂ ಸ್ವಲ್ಪ ಇಳುವರಿ ಜಾಸ್ತಿ ಮಾಡುವುದರ ಬಗ್ಗೆ ಹೊಸ ಯೋಜನೆಯೊಂದನ್ನು ದಂಪತಿಗಳು ಹಾಕಿಕೊಂಡಿದ್ದಾರೆ. ಇವರ ಈ ಕಾರ್ಯ ಭೂಮಿಯ ಬಗ್ಗೆ ಅವರಿಗಿರುವ ಕಾಳಜಿ ಎಲ್ಲಾ ರೈತರಿಗೂ ಮಾದರಿಯಾಗಿದೆ.
ಕೇರನ್ ರಾಜ್ಯ ಕೃಷಿ ಸಂಯೋಜಕರು ಪ್ರಸನ್ನ ಡಿ ಎ ಕಾರ್ಯಕ್ರಮ ನಿರೂಪಣೆ ಮಾಡಿದರು. ಕರ್ನಾಟಕ ಕೇರನ್ ತಂಡದ ಪ್ರಮುಖ ಕೃಷಿ ಮಾರ್ಗದರ್ಶಕರಾದ ಸಚಿನ್ ಕಬ್ಬೂರವರು ದಂಪತಿಗಳಿಗೆ ಪ್ರಶಸ್ತಿ ವಿತರಿಸಿ ಸಾವಯವ, ಪ್ರಾಚೀನ ಕೃಷಿ ಪದ್ಧತಿ, ಅಧಿಕ ಇಳುವರಿಗಾಗಿ ಮಾಡಬೇಕಾದ ಕೃಷಿಯ ಹೊಸ ಆಯಾಮಗಳ ಬಗ್ಗೆ ತಿಳಿಸಿಕೊಟ್ಟರು.
ಬ್ಯಾಡಗಿ, ಹಾನಗಲ್, ಚೀಲೂರ್, ಹೊನ್ನಾಳಿ, ಶಿವಮೊಗ್ಗ, ದಾವಣಗೆರೆ, ರಾಣೇಬೆನ್ನೂರ್, ಹಾವೇರಿ, ಹಿರೇಕೆರೂರ, ನ್ಯಾಮತಿ ಭಾಗದ ಕೇರನ್ ಕೃಷಿ ಮಾರ್ಗದರ್ಶಕರು ಮತ್ತು ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನವಲೇಹಾಳ್ ಗ್ರಾಮಸ್ಥರು ಮತ್ತು ರೈತರು ಉಪಸ್ಥಿತರಿದ್ದರು.
ಜೈ ಜವಾನ್ ಜೈ ಕಿಸಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.