ಬಂಟ್ವಾಳ (www.vknews.in) : ಮಜ್ಲಿಸ್ ಸಂಸ್ಥೆ ಗಾಣೆಮಾರ್ ಇದರ ಸೇವೆ ಗೆ ಸಹಕರವಾಗಿ ಜಿಲ್ಲೆ ಯ ಬೇರೆ ಬೇರೆ ಪ್ರದೇಶದ ದೀನಿ ಸೇವೆ ಗೈಯ್ಯುವ ಯುವಕರು ರಚಿಸಿರುವ ಮಜ್ಲಿಸ್ ವಿಂಗ್ ಇದರ ಸಭೆ ಯು ಸಂಸ್ಥೆಯ ಸಾರಥಿ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಗಾಣೆಮಾರ್ ಇವರ ನೇತೃತ್ವದೊಂದಿಗೆ, ಉಮರ್ ಫಾರೂಕ್ ಹನಿಫಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಗಾಣೆಮಾರ್ ಕ್ಯಾಂಪಸ್ ನಲ್ಲಿ ನಡೆಯಿತು.
ಮಜ್ಲಿಸ್ ಪಬ್ಲಿಕ್ ಸ್ಕೂಲ್ ಮ್ಯಾನೇಜರ್ ಸಿದ್ದೀಕ್ MA ಬಜ್ಪೆ ಕಾರ್ಯಕ್ರಮ ಉದ್ಘಾಟಿಸಿ, ಸದ್ದಾಂ ಬೆಳ್ತಂಗಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ವರಕೋಡಿ, ಉಪಾಧ್ಯಕ್ಷರಾಗಿ ಮಹಮ್ಮದ್ ಪಡ್ಡಂದಡ್ಕ, ಮಹಮ್ಮದ್ ಅಮ್ಮುಂಜೆ, ಪ್ರಧಾನ ಕಾರ್ಯದರ್ಶಿಯಾಗಿ, ಮಹಮ್ಮದ್ ಶರೀಫ್ ಬಡಕಬೈಲು, ಅಬೂಬಕ್ಕರ್ ಸಿದ್ದೀಕ್ ಉದ್ದಬೆಟ್ಟು, ಮಹಮ್ಮದ್ ಸವಾದ್ ಕೈಕಂಬ, ಸುರಾಖತ್ ಪಡ್ಡಂದಡ್ಕ, ನಿಜಾಮ್ ಬಾಕಿಮಾರ್, ಫೈನಾನ್ಸ್ ಸೆಕ್ರೆಟರಿ ಯಾಗಿ ಜಲೀಲ್ ಮೊಗರು ಅವರನ್ನು ಆಯ್ಕೆ ಮಾಡಲಾಯಿತು. ಮಹಮ್ಮದ್ ಶರೀಫ್ ವರಕ್ಕೊಡಿ ಸ್ವಾಗತಿಸಿ, ಮುಹಮ್ಮದ್ ಸವಾದ್ ಧನ್ಯವಾದವಿತ್ತರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.