(www.vknews.in) : ಅವರೊಬ್ಬ ಅಲ್ಲಾಹನ ಪ್ರವಾದಿ. ಬರೀ ಪ್ರವಾದಿಯಲ್ಲ, ಅಲ್ಲಾಹನ ಖಲೀಲ್ (ಆಪ್ತ ಮಿತ್ರ) ಬಿರುದಾಂಕಿತ ಪ್ರವಾದಿ… ಒಂದು ಮಗುವಿಗಾಗಿ ಜೀವಮಾನವಿಡೀ ಪ್ರಾರ್ಥಿಸಿ, ಇನ್ನು ಮಕ್ಕಳಾಗಲ್ಲ ಎಂದು ಭಾವಿಸುವ ತೊಂಭತ್ತರ ಹರೆಯದಲ್ಲಿ ಪ್ರಿಯ ಪತ್ನಿ ಗರ್ಭಿಣಿಯಾದಳು.
ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಆ ದಂಪತಿಗೆ ಮತ್ತೂ ಅಲ್ಲಾಹನ ಪರೀಕ್ಷೆ ಮುಂದುವರಿದಿತ್ತು. ತುಂಬು ಗರ್ಭಿಣಿಯನ್ನು ಕರೆದುಕೊಂಡು ಅಂದಿನ ನಿರ್ಜನ ಜನವಾಸವಿಲ್ಲದ ಕಾಡು ಪ್ರದೇಶವಾದ ಮಕ್ಕಾದೆಡೆಗೆ ಕರೆದುಕೊಂಡು ಹೋಗಲು ಅಲ್ಲಾಹನ ಅದೇಶವಿಟ್ಟನು… ಆದೇಶ ಮೇರೆಗೆ ನಿರ್ಜನ ಪ್ರದೇಶಕ್ಕೆ ತೆರಳಿದ ಆ ದಂಪತಿಗಳಿಗೆ ಅಲ್ಲಾಹನ ಪರೀಕ್ಷೆ ಇನ್ನೂ ಕಠೋರವಾಗಿತ್ತು.
ತುಂಬು ಗರ್ಬಿಣಿಯಾದ ಪತ್ನಿಯನ್ನು ಆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಲು, ಅವರು ಅದಕ್ಕೂ ತಯಾರದರು. “ಗರ್ಬಿಣಿಯಾದ ನನ್ನನ್ನು ಯಾರೂ ಇಲ್ಲದ ಇ ಪ್ರದೇಶ ಒಬ್ಬಂಟಿಯಾಗಿ ಬಿಟ್ಟು ತಾವು ಎಲ್ಲಿಗೆ ಹೋಗುತ್ತೀರಿ…?” ಉತ್ತರವಿಲ್ಲ… ಮತ್ತೇ ಕೂಡಾ ಪ್ರಶ್ನಿಸಿದರು… ಉತ್ತರವಿಲ್ಲ…! ಗತ್ಯಂತರವಿಲ್ಲದೆ ಮತ್ತೆ ಕೇಳಿದರು.. “ಇದು ಕೂಡಾ ಅಲ್ಲಾಹನ ಆಜ್ಞೆಯೇ…” “ಹೂಂ…” ತಲೆಯಾಡಿಸಿ ಅವರು ಮುನ್ನೆಡೆದರು…
ಅಲ್ಲಾಹನ ಆಜ್ಞೆಯಾದರೆ ಕ್ಷಮಿಸುವುದೇ ದಾರಿ… ಆ ನಿರ್ಜನ ಪ್ರದೇಶದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದರು. ಕೈಯಲ್ಲಿದ್ದ ಆಹಾರ ನೀರು ಖಾಲಿಯಾಯಿತು.. ಮಗು ಅಳತೊಡಗಿತು… ಒಂದು ಹನಿ ನೀರಿಗಾಗಿ ಆ ಮಹಾ ಮಾತೆ ಹತ್ತಿರದ ಪರ್ವತಕ್ಕೆ ತೆರಲಿ ತಡಕಾಡಿದರು. ನೀರು ಸಿಗಲಿಲ್ಲ. ಮತ್ತೆ ಮಗುವಿನತ್ತ ಬಂದರು. ಮಗು ಬಾಯಾರಿಕೆಯಿಂದ ಚಡಪಡಿಸುತ್ತಿತ್ತು. ತಾಯಿ ಇನ್ನೊಂದು ಪರ್ವತದತ್ತ ಹೋದರು. ಅಲ್ಲೂ ನೀರು ಸಿಗಲಿಲ್ಲ. ನಿರಾಸೆಯಿಂದ ಮತ್ತೆ ಮಗುವಿನತ್ತ ಮರಳಿದರು. ಮಗು ಅಳುತ್ತಿದೆ…
ಕಾಲುಗಳೆರಡನ್ನೂ ಜೋರಾಗಿ ಭೂಮಿಯ ಮೇಲೆ ಒಡೆದು ಸದ್ದು ಮಾಡುತ್ತಿದೆ… ಇದನ್ನು ಕಂಡು ಯಾವ ಮಾತೃ ಹೃದಯ ಸಹನೆಯಿಂದ ಇರಬಹುದು. ಕ್ಷಣಾರ್ದದಲ್ಲಿ ಅಲ್ಲೊಂದು ಅದ್ಬುತ ಉಂಟಾಯಿತು.. ಮಗುವಿನ ಕಾಲಿನ ಪಾದದಡಿಯಿಂದ ನೀರಿನ ಒರತೆಯೊಂದು ಚಿಮ್ಮಿತು. ಒಂದು ಮಹಾ ಜಳಪ್ರಳಯ ಆ ಒರತೆಯ ಮೂಲಕ ಉಂಟಾಯಿತು.
ನಾಲ್ಕು ಸಾವಿರ ವರ್ಷ ದಾಟಿದರೂ ಆ ಒರತೆ ಇಂದಿಗೂ ಅದೇ ರೀತಿಯಲ್ಲಿದೆ. ಜಗತ್ತಿನ ವಿವಿದ ರಾಷ್ಟ್ರಗಳಿಗೆ ಅದೆಷ್ಟೋ ನೀರು ಸರಬರಾಜದರೂ ಆ ಒರತೆಗೆ ಯಾವುದೇ ಕೊರತೆಯಿಲ್ಲ…
ಮಗು ಬೆಳೆಯುತ್ತಾ ಬಂತು… ಅಲ್ಲಾಹನ ಪರೀಕ್ಷೆ ಮುಂದುವರಿದಿತ್ತು… ಕಾಡಿ ಬೇಡಿ ಅಲ್ಲಾಹು ನೀಡಿದ ಏಕೈಕ ಕರುಳಕುಡಿಯನ್ನು ಅಲ್ಲಾಹನಿಗಾಗಿ ಬಲಿಯರ್ಪಿಸಲು ಅಲ್ಲಾಹನ ಆಜ್ಞೆ… ಅದಕ್ಕೂ ಆ ಮಹಾ ತಂದೆ ಸಿದ್ದರಾದರು… ನನ್ನ ತಂದೆ ನನ್ನ ಕತ್ತು ಕೊಯ್ಯುತ್ತಿದ್ದಾರೆ ಎಂದು ತಿಳಿದೂ ತಂದೆಗೆ ವಿದೇಯರಾದರು. ನನ್ನನ್ನು ಅಂಗಾತ ಮಲಗಿಸಿ ಬಲಿಯರ್ಪಿಸಿದರಿ… ನನ್ನ ಮುಖ ನೋಡಿದಾಗ ಕನಿಕರ ಉಂಟಾಗಿ ನೀವು ಹಿಂಜರಿದರೆ… ನನ್ನ ರಕ್ತಮಿಶ್ರಿತ ವಸ್ತ್ರವನ್ನು ನನ್ನ ತಾಯಿಗೆ ತೋರಿಸದಿರಿ ಎಂದು ಅಪೇಕ್ಷೆ ಮಾಡಿದ ಆ ಮಹಾ ಮಗ… ಹೀಗೆಯೇ ಜೀವನದುದ್ದಕ್ಕೂ ತ್ಯಾಗದ, ಬಲಿದಾನದ ಒಂದರ ಮೇಲೊಂದರಂತೆ ಎರಗಿ ಬಂದ ಪರೀಕ್ಷೆಯ ಸರಮಾಲೆಗಳನ್ನು ತನ್ನ ಸಹನೆಯ ಮೂಲಕ ಎದುರಿಸಿ ಅಲ್ಲಾಹನ ಮೇಲೆ ಅಚಂಚಲ ವಿಶ್ವಾಸವಿರಿಸಿ ಗೆದ್ದು ಬಂದ…
ವರ್ಷಗಳು ನಾಲ್ಕು ಸಾವಿರ ದಾಟಿದರೂ… ಇಂದಿಗೂ ಅಚ್ಚಲಿಯದೇ ವಿಶ್ವದಾದ್ಯಂತ ಸ್ಮರಿಸಲ್ಪಡುವ ತಂದೆ ತಾಯಿ ಮಗನ ಕತೆಯನ್ನು ನೆನಪಿಸುವ ಈದುಲ್ ಅಳ್ಹಾ… ಎಲ್ಲರಿಗೂ ಸಂತೋಷ ತರಲಿ ಸಮಸ್ಯೆಯ ಜೀವನ ಅಂತ್ಯವಾಗಿ… ಮಿಲ್ಲತ್ ಇಬ್ರಾಹೀಮಿಯ್ಯ ನಮ್ಮ ಜೀವನ ಮಾರ್ಗವಾಗಲಿ….
✍️ಇಮ್ರಾನ್ ರೆಂಜಲಾಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.