(www.vknews.in) : ದಿನಾಂಕ 27-06-2023 ಮಂಗಳವಾರದಂದು ಕಂಕನಾಡಿ ನಗರ ಪೊಲೀಸ್ ಠಾಣೆ ಇದರ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಸಂವಾದ ಕಾರ್ಯಕ್ರಮವನ್ನು ನಮ್ಮ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಂಕನಾಡಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀ ರಘುನಾಯಕ್ ಅವರು ವಿದ್ಯಾರ್ಥಿಗಳನ್ನು ಉದ್ಹೇಶಿಸಿ-” ವಿದ್ಯಾರ್ಥಿಗಳು ಹೇಗೆ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಾರೆ ಮತ್ತು ಅವರ ಭವಿಷ್ಯದ ಜೀವನದ ಮೇಲೆ ಅವು ಯಾವೆಲ್ಲ ಕೆಟ್ಟ ಪರಿಣಾಮಗಳು ಬೀರುತ್ತವೆ? “ಎಂಬುದನ್ನು ತಮ್ಮ ವೃತ್ತಿಜೀವನದ ಅನುಭವಗಳೊಂದಿಗೆ ಮನಮುಟ್ಟುವಂತೆ ತಿಳಿಹೇಳಿದರು.
ಈ ದಿನದ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಶಾಲೆಯ ಸಹಶಿಕ್ಷಕಿಯಾದ ನಿಶಾ ಅವರು ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶರತ್ ಕುಮಾರ್ ರವರು ಸ್ವಾಗತವನ್ನು ಕೋರಿದರು ಮತ್ತು ಶಾಲಾ ಸುಪರ್ವೈಸರ್ ಆದ ಕೈರುನ್ನಿಸಾ ಮೇಡಂರವರು ಆಗಮಿಸಿದ ಅತಿಥಿಗಳಿಗೆ ಕಿರು ಕಾಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯ ಅಂಗವಾದ ವಂದನಾರ್ಪಣೆಯನ್ನು ಸಹಶಿಕ್ಷಕಿ ಯಾದ ದೀಕ್ಷಾ ಅವರು ನಡೆಸಿಕೊಟ್ಟರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.