(www.vknews.in) : ಕೋಲಾರ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ಘೋರ ದುರಂತ ನಡೆದಿದೆ. ಪ್ರೀತಿ ಯಾರಿಗೆ ಎಲ್ಲಿ ಹುಟ್ಟುತ್ತದೆ ಅಂತ ಹೇಳುವುದು ಕಷ್ಟ ಪ್ರೀತಿ ಹೊರತಾಗಿಯೂ ಯಾರು ಬದುಕಲಾರರು ಆದರೆ ಆಪ್ರೀತಿ ಎರಡು ಮನಸ್ಸುಗಳ ಮಿಲನದಿಂದ ಪರಿಪೂರ್ಣವಾಗುತ್ತದೆ ಈ ಪ್ರೀತಿ ಜಾತಿ ಧರ್ಮ ಆಸ್ತಿ ಅಂತಸ್ತು ಇದಾವುದನ್ನೂ ಪರಿಗಣಿಸುವುದಿಲ್ಲ ಆದರೆ ಕೋಲಾರದಲ್ಲಿ ಇಂತಹ ಪ್ರೀತಿಗೆ ಧರ್ಮವೇ ಮುಳುವಾಗಿ ಬಾಳಿ ಬದುಕಬೇಕಾದ ಎರಡು ಜೀವಗಳನ್ನ ಬಲಿ ಪಡೆದಿದೆ ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.ಪ್ರಿಯತಮೆಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಯುವಕ, ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರಿಶಿಷ್ಟ ಜಾತಿಯ ಗಂಗಾಧರ್ (23) ಮತ್ತು ಗೊಲ್ಲ ಸಮುದಾಯದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಗೊತ್ತಾಗಿ ಕೀರ್ತಿಯ ತಂದೆ ಕೃಷ್ಣಮೂರ್ತಿ ತಮ್ಮಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿದ ಯುವಕ ತಾನು ಕೀರ್ತಿ ಇಲ್ಲದೇ ಬಾಳುವುದು ವ್ಯರ್ಥ ಎಂದು ಮೈಸೂರು-ಚೆನ್ನೈ ಏಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.