ಹನೂರು (www.vknews.in) : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ 12 ಕಿಲೋಮೀಟರ್ ದೂರದಲ್ಲಿರುವ ನಾಗಮಲೆ ದೇವಸ್ಥಾನಕ್ಕೆ ಹೋಗುವ ತೂಪಾನ್ ಜೀಪ್ ಗಳಲ್ಲಿ ಕೇವಲ 7ರಿಂದ 10 ಜನ ರನ್ನು ತುಂಬಿಕೊಂಡು ಹೋಗಬೇಕು ಆದರೆ ಅಲ್ಲಿನ ತೂಪಾನ್ ಜೀಪ್ ಮಾಲೀಕರು ಹಾಗೂ ಚಾಲಕರು ಗಳು 20 ರಿಂದ 25 ಜನರನ್ನು ತುಂಬಿಕೊಂಡು ವಾಹನಗಳನ್ನು ಚಲಾಯಿಸುತ್ತಿದ್ದು ಭಕ್ತಾದಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ತೂಪಾನ್ ವಾಹನದ ಚಾಲಕರು.
ಸಂಜೆ ಆಗುತ್ತಿದ್ದಂತೆ ನಾಗಮಲೆಯಿಂದ ಮಹದೇಶ್ವರ ಬೆಟ್ಟಕ್ಕೆ ಹಿಂತಿರುಗಬೇಕಾದರೆ ಕೇಳಿದಷ್ಟು ಹಣ ಕೊಡಬೇಕೆಂದು ಜೀಪಿನ ಮಾಲೀಕರು ಹಾಗೂ ಚಾಲಕರುಗಳು ಭಕ್ತಾದಿಗಳಲ್ಲಿ ಬೇಡಿಕೆ ಇಟ್ಟು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಹಾಗೂ ಕನಿಷ್ಠ 20 ಜನ ಬರೋವರೆಗೂ ಜೀಪನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಡ್ರೈವರ್ ಗಳು ಭಕ್ತಾದಿಗಳ ಮೇಲೆ ಗಲಾಟೆ ಮಾಡಿರುವ ಸನ್ನಿವೇಶ ಸಹ ನಡೆದಿದೆ
ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ತೂಪಾನ್ ಜೀಪ್ ಗಳನ್ನು ಓಡಿಸುತ್ತಿರುವುದು ವಿಷಾದನೀಯ ಇತ್ತ ಪೊಲೀಸ್ ಇಲಾಖೆಯು ಸಹ ಗಮನಹರಿಸುತ್ತಿಲ್ಲ
ಅರಣ್ಯದಲ್ಲಿರುವ ಚೆಕ್ ಪೋಸ್ಟ್ ಬೀಗವನ್ನು ಸಹ ಅಲ್ಲಿನ ಚಾಲಕರು ಹಾಗೂ ಮಾಲೀಕರ ಹತ್ತಿರ ಇದ್ದು ಅರಣ್ಯ ಇಲಾಖೆಯು ಕಣ್ಮುಚ್ಚಿ ಕುಳಿತಿದೆ, ಸಂಜೆ ಆಗುತ್ತಿದ್ದಂತೆ ಭಕ್ತಾದಿಗಳ ಹತ್ತಿರ ಹೆಚ್ಚುವರಿ ಹಣ ಪಡೆದು ಅರಣ್ಯದೊಳಗೆ ವಾಹನಗಳು ಒಡಾಡುತ್ತಿದ್ದರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ ಆಗಿದೆ
ಭಕ್ತಾದಿಯೊಬ್ಬರು ಚಾಲಕರನ್ನು ಸಂಜೆ 6:00 ನಂತರ ಒಬ್ಬರಿಗೆ ರೂ.300ಗಳನ್ನು ಯಾಕೆ ತಗೊಳ್ತೀರಾ ಎಂದು ಪ್ರಶ್ನಿಸಿದಾಗ ಚಾಲಕನು ಅರಣ್ಯ ಕಾಯುವ ಗಾರ್ಡಗೆ ಒಂದು ಗಾಡಿಗೆ 300 ಗಳಂತೆ ಕೊಡಬೇಕು ಎಂದು ಹೇಳಿದ್ದಾರೆ ಹಾಗೂ ಸಂಜೆ 6:00 ನಂತರ ಆ ಗೇಟಿನಲ್ಲಿ ಯಾರು ಕಾವಲುಗಾರರು ಇರುತ್ತಾರೆ ಆ ಕಾವಲುಗಾರರಿಗೆ ಆ ದುಡ್ಡು ತಲುಪುತ್ತದೆ ಎಂದು ಉತ್ತರಿಸಿದ್ದಾರೆ.
ಅಮಾವಾಸ್ಯೆ ,ಹುಣ್ಣಿಮೆ , ವಾರದ ವಿಶೇಷ ದಿನಗಳಲ್ಲಿ ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನಾಗಮಲೆಗೆ ತೆರಳುತ್ತಾರೆ 20ಕ್ಕೂ ಹೆಚ್ಚು ಜನರನ್ನು ತೂಫಾನ್ ಗಾಡಿಗಳಲ್ಲಿ ತುಂಬಿಕೊಂಡು ಹೋದರೆ ಅವರ ಜೀವಕ್ಕೆ ಯಾರು ಹೋಣೆಯಾಗುತ್ತಾರೆ ಆದ್ದರಿಂದ ಇದನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಇತ್ತ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.
ವರದಿ :ವಿಜಯ್ ಕುಮಾರ್. ಕಾಂಚಳ್ಳಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.