ಬೊಗೋಟಾ (www.vknews.in) ; ಕೊಲಂಬಿಯಾ ವಾಯುಪಡೆಯ ವಿಮಾನವೊಂದು ತರಬೇತಿ ವೇಳೆ ಗಾಳಿಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ವಿಲ್ಲಾವಿಸೆನ್ಸಿಯೋ ವಾಯುನೆಲೆಯಲ್ಲಿ ಈ ಘಟನೆ ನಡೆದಿದೆ. ವಿಮಾನವು ಆಕಾಶದಲ್ಲಿ ಹಾರುತ್ತಿದ್ದಾಗ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ನಂತರ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.
ಘಟನೆ ಬಳಿಕ ಅಪಘಾತದ ವಿಡಿಯೋ ಹೊರಬಿದ್ದಿದೆ. ದೇಶದ ವಾಯುಪಡೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಪಘಾತದಲ್ಲಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ. ಸೆಂಟ್ರಲ್ ಕೊಲಂಬಿಯಾದ ಮೆಟಾ ಡಿಪಾರ್ಟ್ಮೆಂಟ್ನಲ್ಲಿರುವ ಸೇನಾ ನೆಲೆಯಲ್ಲಿ ತರಬೇತಿ ಅಭ್ಯಾಸದ ವೇಳೆ ವಿಮಾನಗಳು ಡಿಕ್ಕಿ ಹೊಡೆದವು.
10 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಎರಡು ವಿಮಾನಗಳು ಹಾರುವಾಗ ಡಿಕ್ಕಿ ಹೊಡೆದು, ನಂತರ ಬೆಂಕಿ ಕಾಣಿಸಿಕೊಂಡು ವಿಮಾನವು ಕೆಳಗೆ ಬೀಳುತ್ತದೆ. ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು.
2 dead after Colombian Air Force planes collide in mid-air during training in Villavicencio, #Colombia pic.twitter.com/n1xiYPQBMy — BIKASH KUMAR JHA (@bikash_jha_) July 1, 2023
2 dead after Colombian Air Force planes collide in mid-air during training in Villavicencio, #Colombia pic.twitter.com/n1xiYPQBMy
— BIKASH KUMAR JHA (@bikash_jha_) July 1, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.