ಹೊಸದಿಲ್ಲಿ (www.vknews.in) ; ಎರಡು ವಿಮಾನಗಳು ಒಂದೇ ರನ್ವೇಯಿಂದ ಏಕಕಾಲಕ್ಕೆ ಟೇಕಾಫ್ ಆಗಿದ್ದು, ಭೀತಿ ಹುಟ್ಟಿಸಿತ್ತು. ಆದರೆ ವಿಮಾನದ ಪೈಲಟ್ನ ಸಮಯೋಚಿತ ಮಧ್ಯಪ್ರವೇಶದಿಂದಾಗಿ ಭಾರಿ ಅನಾಹುತ ತಪ್ಪಿದೆ. ಅಹಮದಾಬಾದ್ನಿಂದ ಬಂದ ವಿಮಾನ ಮತ್ತು ಬಾಗ್ ದೋಗ್ರಾಕ್ಕೆ ತೆರಳುತ್ತಿದ್ದ ವಿಮಾನ ಒಂದೇ ರನ್ವೇಯಲ್ಲಿ ಲ್ಯಾಂಡ್ ಆಗಿವೆ. ಘಟನೆಯ ಸಮಯದಲ್ಲಿ ವಿಸ್ತಾರಾ ಏರ್ಲೈನ್ಸ್ನ ಎರಡೂ ವಿಮಾನಗಳಲ್ಲಿ ತಲಾ 300 ಪ್ರಯಾಣಿಕರಿದ್ದರು.
ಅಹಮದಾಬಾದ್ ದೆಹಲಿ ವಿಮಾನವು ಲ್ಯಾಂಡ್ ಆದ ತಕ್ಷಣ, ಪಾರ್ಕಿಂಗ್ ಬೇಗೆ ಮುಂದುವರಿಯಲು ಸಕ್ರಿಯ ರನ್ವೇ ದಾಟಲು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪೈಲಟ್ಗೆ ಸೂಚನೆ ನೀಡಿತು. ಇದೇ ವೇಳೆ ದೆಹಲಿ ಬಾಗ್ ಡೋಗ್ರಾ ವಿಮಾನ ಕೂಡ ಇದೇ ರನ್ ವೇಯಿಂದ ಟೇಕಾಫ್ ಆಗುವಂತೆ ಸೂಚನೆ ನೀಡಲಾಗಿತ್ತು.
ಅಹಮದಾಬಾದ್ ವಿಮಾನದ ಪೈಲಟ್ ಸೋನು ಗಿಲ್ (45) ಇದನ್ನು ಅರಿತು ತಕ್ಷಣ ಮಧ್ಯಪ್ರವೇಶಿಸಿದರು. ವಿಮಾನಗಳು ಕೇವಲ 1.8 ಕಿಮೀ (1,800 ಮೀ) ಅಂತರದಲ್ಲಿದ್ದಾಗ ಪೈಲಟ್ ಇದನ್ನು ಅರಿತುಕೊಂಡರು. ಕೂಡಲೇ ಎಟಿಸಿಗೆ ಮಾಹಿತಿ ನೀಡಿದರು.
ವಿಸ್ತಾರಾ ವಿಮಾನ VTI926 ರನ್ವೇ 29L ನಲ್ಲಿ ಇಳಿಯಿತು. ATC ಈ ವಿಮಾನವನ್ನು ರನ್ವೇ 29R ದಾಟಲು ಮತ್ತು ಪಾರ್ಕಿಂಗ್ ಬೇಗೆ ಹೋಗಲು ಸಲಹೆ ನೀಡಿದೆ. ಆದರೆ ಎಟಿಸಿ ಅಧಿಕಾರಿಯು ವಿಟಿಐ 926 ವಿಮಾನಕ್ಕೆ ನೀಡಿದ್ದ ಸೂಚನೆಗಳನ್ನು ಮರೆತಿದ್ದಾರೆ ಮತ್ತು ರನ್ವೇ 29 ಆರ್ನಿಂದ ವಿಟಿಐ 725 ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳುತ್ತದೆ.
VTI926 ನಿಂದ ಮಾಹಿತಿ ಪಡೆದ ನಂತರ, ಅಧಿಕಾರಿಯು ತಪ್ಪನ್ನು ಅರಿತುಕೊಂಡರು ಮತ್ತು VTI725 ಗೆ ಟೇಕ್-ಆಫ್ ಅನುಮತಿಯನ್ನು ರದ್ದುಗೊಳಿಸಿದರು. ಎಟಿಸಿ ಅಧಿಕಾರಿ ವಿರುದ್ಧ ಡಿಜಿಸಿಎ ಕ್ರಮ ಕೈಗೊಂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.