ಪಾಲಕ್ಕಾಡ್ (www.vknews.in) ; ಯುವ ಆಯುರ್ವೇದ ವೈದ್ಯೆಯೊಬ್ಬರು ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತ್ರಿತಾಲ ಮೇಜತ್ತೂರಿನಲ್ಲಿ ನಡೆದಿದೆ. ವಿನೋದ್ ಮೆನನ್ ಅವರ ಪತ್ನಿ ಮತ್ತು ಯೂಟ್ಯೂಬರ್ ರಿತಿಕಾ ಮಣಿಶಂಕರ್ (32) ನಿಧನರಾದರು.
ನಿನ್ನೆ ರಾತ್ರಿ ರಿತಿಕಾ ಮನೆಯೊಳಗಿನ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಪೆರಿಂಗೋಡಿನ ಖಾಸಗಿ ಚಿಕಿತ್ಸಾ ಕೇಂದ್ರದಲ್ಲಿ ಆಯುರ್ವೇದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಕ್ಕಳು: ಮಿತ್ರನ್, ಬಾಲಾ.
ಉನ್ನತ ವ್ಯಾಸಂಗ ಮುಂದುವರಿಸಲಾಗದೆ ರಿತಿಕಾ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಂಚನಾಮೆ ಪೂರ್ಣಗೊಳಿಸಿ, ಮೃತದೇಹವನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.