ಬೆಂಗಳೂರು (www.vknews.in) : ಕೇರಳದ ಮಹಿಳೆಯೊಬ್ಬರನ್ನು ಆಕೆಯ ಲಿವ್-ಇನ್ ಪಾಲುದಾರ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಿರುವನಂತಪುರಂ ಮೂಲದ ದೇವ (24) ಕೊಲೆಯಾದವರು. ಬೆಂಗಳೂರಿನ ಬೇಗೂರು ಬಳಿಯ ನ್ಯೂ ಮೈಕೋ ಲೇ ಔಟ್ ನಲ್ಲಿ ನಿನ್ನೆ ರಾತ್ರಿ ಈ ಕೊಲೆ ನಡೆದಿದೆ.
ಮಹಿಳೆಯೊಂದಿಗೆ ವಾಸವಿದ್ದ ಕೊಲ್ಲಂ ಮೂಲದ ವೈಷ್ಣವ್ (24) ಬಂಧಿತ ಆರೋಪಿ. ವೈಷ್ಣವ್ ಕುಕ್ಕರ್ ನಿಂದ ತಲೆಗೆ ಹೊಡೆದು ದೇವಾ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಇಬ್ಬರೂ ಶಾಲಾ ದಿನಗಳಿಂದಲೂ ಪ್ರೀತಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ನಿನ್ನೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಕ್ಕಪಕ್ಕದ ಮನೆಯವರಿಂದ ಗಲಾಟೆ ನಡೆದ ವಿಷಯ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.