(www.vknews.in) ಮರಣಾನಂತರವೂ ಜನಮಾನಸದಲ್ಲಿ ಉಳಿಯುವ ಒಳಿತಿನ ವಾಹಕರಾಗ ಬೇಕು.ತಬೂಕ್ ದಾರಿಮಿ
ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಸೆಂಟ್ರಲ್ ಕಮಿಟಿ ಹಾಲಿನಲ್ಲಿ ಮರ್ಹೂಂ ಸೆಯ್ಯಿದ್ ಅಹ್ಮದ್ ಭಾಷಾ ತಂಙಳ್ ರವರ ಅನುಸ್ಮರಣೆ ಕಾರ್ಯಕ್ರಮವು ನಡೆಯಿತು ಈ ಸಂದರ್ಭದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಮಾಜಿ ಅಧ್ಯಕ್ಷರು ಜಿಲ್ಲಾ ಮುಸ್ಲಿಂ ಕೋಡಿನೇಷನ್ ಸಮಿತಿ ಅಧ್ಯಕ್ಷರೂ ಆದ ಉಸ್ತಾದ್ ತಬೂಕ್ ದಾರಿಮಿ ಯವರು ಮಾತನಾಡಿ , ಜೀವಂತವಿರುವಾಗ ಯಾರೇ ಎಷ್ಟೇ ತೆಗಳಿದರೂ ಅದಕ್ಕೆ ತಲೆಕೆಡಿಸಿಕೊಂಡು ಕುಗ್ಗದೆ ಮರಣದ ನಂತರ ಹೋಗಳುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ನಮ್ಮಿಂದಗಲಿದ ಸೆಯ್ಯಿದ್ ಭಾಷಾ ತಂಙಳ್ ರವರು ಈ ವ್ಯಕ್ತಿತ್ವವನ್ನು ಹೊಂದಿದ್ದರು.ಅವರು ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ವಕ್ತಾರರಾಗಿದ್ದರೂ ಎಲ್ಲರೊಂದಿಗೂ ಸೌಹಾರ್ದತೆಯೊಂದಿಗೆ ಬೆರೆತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆ ಗಳಿಸಿದ ನೇತಾರರಾಗಿದ್ದರು .ಅವರ ಮರಣವು ಕಾರ್ಯಕರ್ತರಿಗೆ ಉತ್ತಮ ಸಂದೇಶವನ್ನು ನೀಡಿದೆ. ಅದರಂತೆ ನಾವೆಲ್ಲರೂ ಮುನ್ನಡೆಯಬೇಕು ಎಂದು ದಾರಿಮಿಯವರು ಅನುಸ್ಮರಣ ಭಾಷಣದಲ್ಲಿ ಹೇಳಿದರು.ಸೆಂಟ್ರಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ರವರು ಮಾತನಾಡಿ ರಾಜಕೀಯ ರಂಗಗಳಲ್ಲಿ ಮಾತ್ರವಲ್ಲ ದಾರ್ಮಿಕ ಶೈಕ್ಷಣಿಕ ರಂಗಗಳಲ್ಲಿಯೂ ಕ್ರಾಂತಿ ಮೂಡಿಸಿದ ವ್ಯಕ್ತಿ ಆಗಿದ್ದರು ಸೆಯ್ಯಿದ್ ಭಾಷಾ ತಂಙಳ್ ರವರು ಎಂದು ಹೇಳಿ ಗುಣಗಾನ ಮಾಡಿದರು.ಕಾರ್ಪೊರೇಟ್ ಲತೀಪ್ ಕುದ್ರೋಳಿ, ಮುಸ್ಲಿಂ ಲೀಗ್ ಮಾಜಿ ಅದ್ಯಕ್ಷದರುಗಳಾದ ಅಡ್ವೊಕೇಟ್ ಸುಲೈಮಾನ್, ಸಿದ್ದೀಕ್ ಬಂಟ್ವಾಳ್, ಬಾಷಾ ತಂಙಳ್ ಸಹೋದರ ಶಾಹುಲ್ ಹಮೀದ್ ತಂಙಳ್, ಪ್ರಧಾನ ಕಾರ್ಯದರ್ಶಿ ಜನಾಬ್ ಕರೀಂ ಕಡಬ, ಮುಂತಾದ ಹಲವು ನೇತಾರರು ಬಾಷಾ ತಂಙಳ್ ರವರನ್ನು ಅನುಸ್ಮರಿಸಿ ಭಾಷಣ ಗೈದರು.ಅದ್ದು ಹಾಜಿ ಮಂಗಳೂರು,ಇಬ್ರಾಹಿಂ ಹಾಜಿ ಬೆಂಗರೆ, ಶರೀಫ್ ಹಾಜಿ ಜೋಕಟ್ಟೆ, ಬಿಜ್ಲಿ ಹಸೈನಾರ್ ಹಾಜಿ ಕಂದಕ್. ರೆಹಮಾನ್ ಕೆ ಸಿ ರೋಡ್ .ಅಬ್ದುಲ್ ಸತ್ತಾರ್ ಕೋಡಿಕಲ್ ಎಚ್ ಕೆ ಕುಂಚ್ ನಜೀರ್ ಬೆಂಗ್ರೆ ರಹ್ಮಾನ್ ಹಾಜಿ ಮುಂತಾದ ಹಲವು ನೇತಾರರು ಭಾಗವಹಿಸಿದ್ದರು.ಮುಸ್ಲಿಂ ಲೀಗ್ ನೇತಾರ ಆದಂ ಹುಸೈನ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು.ಮುಸ್ಲಿಂ ಲೀಗ್ ವಕ್ತಾರ ಇಸ್ಮಾಯಿಲ್ ಮಂಗಳೂರು ಸ್ವಾಗತಿಸಿದರು ಕಾರ್ಯಕ್ರಮವನ್ನು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.