ವಿಟ್ಲ(www.vknews.in) : ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ ಎನ್ನಲಾಗಿದೆ . ನೀರಪಳಿಕೆ ಮಹಮ್ಮದ್ ಕುಂಞಿ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇರುವ ಸಂದರ್ಭ ಮನೆಯ ಮುಂಬಾಗಿಲ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳಗೆ ಪ್ರವೇಶಿಸಿ ಒಳಗಿನಿಂದ ಬಾಗಿಲ ಚಿಲಕ ಹಾಕಿ ಮಹಿಳೆಯ ಹತ್ತಿರ ಚಾಕುವಿನೊಂದಿಗೆ ಬಂದು ಕಿವಿಯಲ್ಲಿ ಇರುವ ಚಿನ್ನ ಕೊಡುವಂತೆ ಕೇಳಿದ್ದಾನೆ.
ಬೆದರಿದ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾದ್ದಾನೆ. ಸ್ಥಳೀಯರು 112 ಗೆ ಕರೆಮಾಡಿ ಮಾಹಿತಿ ನೀಡಿದಾಗ ತುರ್ತು ಕಾರ್ಯಪಡೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದರು. ಬಳಿಕ ವಿಟ್ಲ ಠಾಣೆಗೆ ಮಾಹಿತಿ ನೀಡಿದರು. ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.