ಅಹ್ಮದಾಬಾದ್ (www.vknews.in) ; ಸಂಬಳ ಕೇಳಿದ ದಲಿತ ಯುವಕನ ಬಾಯಿಗೆ ಶೂ ಇಟ್ಟು ಬಲವಂತವಾಗಿ ಕ್ಷಮೆ ಕೇಳಿಸಿದ ಘಟನೆಯಲ್ಲಿ ಸಂಸ್ಥೆಯ ಮಾಲಕಿ ಮೇಲೆ ದೂರು ದಾಖಲಾಗಿದೆ. ಗುಜರಾತ್ನ ಮೋರ್ಬಿಯಲ್ಲಿ ಈ ಘಟನೆ ನಡೆದಿದೆ. ಸಂಸ್ಥೆಯ ಮಾಲಕಿ ವಿಭೂತಿ ಪಟೇಲ್ (ರಾಣಿಬಾ) ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಲೇಶ್ ದಲ್ಸಾನಿಯಾ (21) ಎಂಬುವವರು ದೂರು ದಾಖಲಿಸಿದ್ದಾರೆ.
ನೀಲೇಶ್ ದಲ್ಸಾನಿಯಾ ಅವರ ದೂರಿನ ಪ್ರಕಾರ, ಅವರನ್ನು ಟೆರೇಸ್ಗೆ ಎಳೆದೊಯ್ದು ಥಳಿಸಿದ್ದಾರೆ. ನಿಲೇಶ್ ಅವರನ್ನು ಕಳೆದ ತಿಂಗಳು ರಾಣಿಬಾ ಇಂಡಸ್ಟ್ರೀಸ್ನಲ್ಲಿ ರೂ 12,000 ವೇತನದಲ್ಲಿ ನೇಮಿಸಲಾಗಿತ್ತು. ಆದರೆ ಅಕ್ಟೋಬರ್ 18ರಂದು ವಿನಾಕಾರಣ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಯುವಕ ಹೇಳುತ್ತಾನೆ.
ಪ್ರಕರಣ ಏನೆಂದರೆ ನೀಲೇಶ್, ಆತನ ಸಹೋದರ ಮೆಹುಲ್ ಹಾಗೂ ನೆರೆಹೊರೆಯವರು ಕಚೇರಿಗೆ ಹೋದಾಗ ವಿಭೂತಿ ಸಹೋದರ ಓಂ ಪಟೇಲ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ನಿಲೇಶ್ ತಂಡದೊಂದಿಗೆ ಬಂದು ಸಂಸ್ಥೆಯಿಂದ ಹಣ ಲೂಟಿ ಮಾಡುವಂತೆ ವಿಡಿಯೋ ಚಿತ್ರೀಕರಿಸಿದ್ದಾರೆ ಎಂಬ ದೂರು ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.