ಉಳ್ಳಾಲ (www.vknews.in) : ತಲಪಾಡಿ ಟೋಲ್ಗೇಟ್ ಸಿಬ್ಬಂದಿಯೋರ್ವ ಕಾರು ಚಾಲಕರೋರ್ವರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಕಾರು ಚಾಲಕ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಅಬ್ದುಲ್ ಕರೀಂ ಎಂಬವರ ಕಾರಿನ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತಗೊಂಡಿದೆ. ಆದರೂ ಸಿಬ್ಬಂದಿ ಗೇಟ್ ತೆರೆಯದ ಕಾರಣ ಕರೀಂ ಪ್ರಶ್ನೆಮಾಡಿದ್ದಾರೆ. ಈ ಸಂದರ್ಭ ಸಿಬ್ಬಂದಿ ಕರೀಂ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಇದನ್ನು ಪ್ರಶ್ನಿಸಿದ ಕರೀಂ ಅವರ ಮೇಲೆ ಕೋಪಗೊಂಡ ಟೋಲ್ ಸಿಬ್ಬಂದಿ, ಕರೀಂ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕರೀಂ ಅವರು ಟೋಲ್ಗೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.