ಇಂಫಾಲ (www.vknews.in) : ಮಣಿಪುರದಲ್ಲಿ ನಡೆದ ಬೃಹತ್ ಬ್ಯಾಂಕ್ ದರೋಡೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 18 ಕೋಟಿ ಲೂಟಿ. ಉಖ್ರುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದರೋಡೆಯನ್ನು ಶಸ್ತ್ರಸಜ್ಜಿತ ಗ್ಯಾಂಗ್ ನಡೆಸಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ವ್ಯೂಲ್ಯಾಂಡ್ನ ಉಖ್ರುಲ್ ಟೌನ್ನ ಹೃದಯಭಾಗದಲ್ಲಿದೆ. ಇಲ್ಲಿ 11 ಮಂದಿ ನೌಕರರಿದ್ದರು.
ಮುಸುಕುಧಾರಿ ಗ್ಯಾಂಗ್ ಪಿಎನ್ಬಿ ಬ್ಯಾಂಕ್ನ ಮುಖ್ಯ ಗೇಟ್ನಲ್ಲಿ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿ ಸಂಜೆ 5.40ರ ಸುಮಾರಿಗೆ ಬ್ಯಾಂಕ್ಗೆ ನುಗ್ಗಿದೆ. ಬ್ಯಾಂಕ್ ನೌಕರರ ಪ್ರಕಾರ, 8-10 ಮುಸುಕುಧಾರಿಗಳು ಬ್ಯಾಂಕ್ಗೆ ನುಗ್ಗಿ ನೌಕರರನ್ನು ವಾಶ್ರೂಮ್ನೊಳಗೆ ಕಟ್ಟಿಹಾಕಿ ಬೀಗ ಹಾಕಿದರು. ಆಗ ಮುಸುಕುಧಾರಿಗಳು ಮ್ಯಾನೇಜರ್ ಗೆ ಗನ್ ತೋರಿಸಿ ಬೆದರಿಸಿ ಲಾಕರ್ ತೆರೆದು ಹಣ ದೋಚಿದ್ದಾರೆ.
ಮಣಿಪುರದ ಸ್ಥಳೀಯ ಮಾಧ್ಯಮಗಳು ಘಟನೆಯ ಸಮಯದಲ್ಲಿ ಮುಖ್ಯ ಗೇಟ್ನಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಮಾತ್ರ ಕಾವಲು ಕಾಯುತ್ತಿದ್ದರು ಎಂದು ವರದಿ ಮಾಡುತ್ತಿದೆ. ವರದಿಯ ಪ್ರಕಾರ ಕೇವಲ 10 ನಿಮಿಷಗಳಲ್ಲಿ ಬ್ಯಾಂಕ್ ದರೋಡೆಯಾಗಿದೆ. ಉಖ್ರುಲ್ ಎಸ್ಪಿ ನಿಂಗ್ಶೆಮ್ ವಶುಮ್ ನೇತೃತ್ವದ ಪೊಲೀಸ್ ತಂಡವು ಪಿಎನ್ಬಿ ಬ್ಯಾಂಕ್ಗೆ ತಲುಪಿ ವಿಷಯ ಪರಿಶೀಲಿಸಿತು.
ಸಮೀಪದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಅಗತ್ಯ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಎಲ್ಲಾ ಆರೋಪಿಗಳನ್ನು ಹಿಡಿಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಎಸ್ಪಿ ಹೇಳಿದರು. ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ್ದಾರೆ. PNB ಉಖ್ರುಲ್ ಜಿಲ್ಲೆಗೆ RBI ನ ಕರೆನ್ಸಿ ಚೆಸ್ಟ್ ಆಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತನಿಖಾ ತಂಡ ಹೇಳುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.