ಮಲಪ್ಪುರಂ (www.vknews.in) : ಅಲಂಕಾರಿಕ ಮೀನುಗಳನ್ನು ಬೆಳೆಯಲು ಹಾಕಲಾಗಿದ್ದ ಫೈಬರ್ ಟ್ಯಾಂಕ್ಗೆ ಬಿದ್ದು ಎರಡು ವರ್ಷದ ಬಾಲಕ ದಾರುಣ ಅಂತ್ಯ ಕಂಡಿದ್ದಾನೆ. ತಾನೂರ್ ಕನ್ನಂತಳ್ಳಿಯಲ್ಲಿ ಈ ಅವಘಡ ಸಂಭವಿಸಿದೆ. ಕನ್ನಂತಳ್ಳಿ ಪಣಂಗಾತೂರು ಚೆರಿಯೋರಿ ಮನೆಯಲ್ಲಿ ಫೈಸಲ್ ರವರ ಪುತ್ರ ಮುಹಮ್ಮದ್ ಫಹ್ಮಿನ್ ಮೃತರು. ಮಗು ಕಾಣೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಟ್ಯಾಂಕ್ನಲ್ಲಿ ಬಾಲಕನನ್ನು ಪತ್ತೆಯಾಗಿದೆ.
ಕೂಡಲೇ ಆತನನ್ನು ತನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲಾಗಲಿಲ್ಲ. ಮಗು ಕಾಣದೆ ಮನೆಯವರು ರಸ್ತೆ ಮತ್ತಿತರ ಕಡೆ ಬಹಳ ಹೊತ್ತು ಹುಡುಕಾಡಿದ್ದಾರೆ. ತಿರುರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಣಂಗತ್ತೂರು ಜುಮಾ ಮಸೀದಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನೆಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.