ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್ ): ಕನ್ಯಾನ ದೇಲಂತಬೆಟ್ಟು ದ. ಕ. ಜಿ. ಪಂ. ಉ. ಪ್ರಾ. ಶಾಲೆ 75 ವರ್ಷಗಳನ್ನು ಪೂರೈಸಿದ್ದು, ಅಮೃತ ಮಹೋತ್ಸವ ಸಮಿತಿಯ ಮೂಲಕ ಜ.13ರಂದು ಅಮೃತ ಸಿಂಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಈ ಸಂದರ್ಭ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಿ. ಶ್ರೀನಿವಾಸ್ ತಿಳಿಸಿದರು.
ಅಮೃತ ಬಿಂದು ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ. ನಾರಾಯಣ ರಾವ್ ಧ್ವಜಾರೋಹಣ ನಡೆಸುವ ಮೂಲಕ ಚಾಲನೆಗೊಳ್ಳಲಿದ್ದು, ಶಾಲಾ ವಿದ್ಯಾರ್ಥಿಗಳಿಂದ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಅಮೃತ ಸಿಂಧು ಕಾರ್ಯಕ್ರಮದಲ್ಲಿ ಬೆಳಗ್ಗೆ 10 ರಿಂದ ಪುಟಾಣಿಗಳ ಹಬ್ಬ ನಡೆಯಲಿದ್ದು, ಶಾಲಾ ಕಟ್ಟಡಗಳ ಸ್ಥಳದಾನಿ ಎಂ. ಅಪೂರ್ವ ಅನಂತರಾವ್ ಉದ್ಘಾಟಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ಬಿ.ಕೆ. ಇಬ್ರಾಹಿಂ ಉಪಸ್ಥಿತರಿರಲಿದ್ದಾರೆ.ಅಂಗನವಾಡಿ ಮತ್ತು ಶಾಲಾ ಪುಟಾಣಿಗಳ ಸಾಂಸ್ಕೃತಿಕ ವೈಭವಕ್ಕೆ ಉದಯಶಂಕರ ದೇಲಂತಬೆಟ್ಟು ಚಾಲನೆ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮೃತ ಸಾರ್ಥಕ್ಯ ಸಂಭ್ರಮ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಉದ್ಘಾಟನೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನಡೆಸಲಿದ್ದು, ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ಸುನೀಲ್ ಪ್ರವೀಣ ಪಿಂಟೊ, ಸುನ್ನೀ ಯುವಜನ ಸಂಘದ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಮೊಂಟುಗೋಳಿ ಸೇರಿ ಸರ್ಕಾರದ ಪ್ರೊಟೋಕಾಲ್ ಪ್ರಕಾರ ಜನಪ್ರತಿನಿಧಿ ಮುಖಂಡರು ಭಾಗವಹಿಸಲಿದ್ದಾರೆ. ಸಾಯಂಕಾಲ 4 ಗಂಟೆಗೆ ಗುರುವಂದನೆ, ಸಾಧಕರಿಗೆ ಸನ್ಮಾನ, 5 ಗಂಟೆಗೆ ಅಮೃತ ಧಾರೆ ಶಾಲಾ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ, ರಾತ್ರಿ 8ರಿಂದ ಕಲಾ ರಸಿಕರಿಗೊಂದು ರಸದೌತಣ ಮಂಜೇಶ್ವರ ಶರದಾ ಆರ್ಟ್ ಕಲಾವಿದರಿಂದ ಕಥೆ ಎಡ್ಡೆಂಡು ತುಳು ಸಾಮಾಜಿಕ ನಾಟಕ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ಕೋಶಾಧಿಕಾರಿ ಶಿವರಾಮ ಆಚಾರ್ಯ, ಸದಸ್ಯರಾದ ಮೊಯಿದು ಕುಂಞ, ರಾಜೇಶ್ ಕೊಪ್ಪಳ, ಡಿ.ಬಿ. ಅಬ್ದುಲ್ ರಹಿಮಾನ್, ಎಸ್. ಡಿ. ಎಂ. ಸಿ. ಅಧ್ಯಕ್ಷ ಬಿ.ಕೆ. ಇಬ್ರಾಹಿಂ ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.