ದಮ್ಮಾಮ್(www.vknews.in): ಮಲಗುವ ಕೋಣೆ ಬಿಸಿಯಾಗಿಡಲು ಕೋಣೆಯಲ್ಲಿ ಇದ್ದಿಲು ಹಾಕಿ ನಿದ್ರಿಸಿದ ಇಬ್ಬರು ಭಾರತೀಯರು ಉಸಿರುಗಟ್ಟಿ ಮೃತಪಟ್ಟ ಘಟನೆ ದಮ್ಮಾಮ್ ನಿಂದ ವರದಿಯಾಗಿದೆ. ತಮಿಳುನಾಡು ಮೂಲದವರಾದ ಕಲ್ಲಕುರ್ಚಿ ನಿವಾಸಿ ಮುಸ್ತಫಾ ಹಾಗೂ ವಲಮಂಗಳ ನಿವಾಸಿ ಮೀರಾ ಮೊಯ್ದಿನ್ ತಾಜ್ ಮೊಹಮ್ಮದ್ ಎಂಬವರಾಗಿದ್ದಾರೆ ಮೃತಪಟ್ಟವರು. ಹೌಸ್ ಡ್ರೈವರ್ ಆಗಿ ಕೆಲಸಮಾಡುತ್ತಿದ್ದ ಇವರು ರಾತ್ರಿ ಇದ್ದಿಲು ಬಳಸಿ ಅಡುಗೆ ಮಾಡಿ ಬಾಕಿಯಾದ ಇದ್ದಿಲನ್ನು ತಮ್ಮ ಕೋಣೆಯೊಳಗಿಟ್ಟು ನಿದ್ರಿಸಿದರು. ರಾತ್ರಿಯಲ್ಲಿ ಕೋಣೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದೆ. ಸೌದಿ ಅರೇಬಿಯಾದಲ್ಲಿ ದಿನದಿಂದ ದಿನಕ್ಕೆ ಚಳಿ ವಿಪರೀತವಾಗುತ್ತಿದ್ದು, ಚಳಿಯಿಂದ ತಮ್ಮನ್ನು ರಕ್ಷಿಸಲು ಇಲೆಕ್ಟ್ರಿಕ್ ಹೀಟರ್ ಅಥವಾ ಇಂತಹ ಇದ್ದಿಲುಗಳನ್ನು ಬಳಸುವಾಗ ಬಹಳ ಜಾಗೃತೆ ವಹಿಸಬೇಕಾಗಿ ಅನಿವಾಸಿ ಮಿತ್ರರಲ್ಲಿ ವಿಶ್ವ ಕನ್ನಡಿಗ ನ್ಯೂಸ್ ನ ಕಳಕಳಿಯ ವಿನಂತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.