ಮಂಗಳೂರು (www.vknews.in) : ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಬಜಾಲ್ ನಂತೂರು ಮೂಲದ ತೌಸಿಫ್ ಅಲಿಯಾಸ್ ತೌಚಿ (23) ಮಾರಣಾಂತಿಕ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಅಪರಾಧ ಪತ್ತೆ ದಳದ ಕೈಗೆ ಸಿಕ್ಕಿಬಿದ್ದಿದ್ದಾನೆ. ಗುರುವಾರ ನಗರದ ಫಳ್ನೀರ್ನ ಎಸ್ಎಲ್ ಮಥಿಯಾಸ್ ರಸ್ತೆಯ ಕೊಯಿಲೋ ಲೇನ್ ಬಳಿ ಆಟೋರಿಕ್ಷಾದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ವೇಳೆ ಬಂಧಿಸಲಾಗಿದೆ.
ವರದಿಗಳ ಪ್ರಕಾರ, ತೌಸಿಫ್ ನಿಷೇಧಿತ ಡ್ರಗ್ ಎಂಡಿಎಂಎಯನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನು. 45,000 ಮೌಲ್ಯದ ಒಂಬತ್ತು ಗ್ರಾಂ ಎಂಡಿಎಂಎ, ಡಿಜಿಟಲ್ ತೂಕದ ಮಾಪಕ, ಮೊಬೈಲ್ ಫೋನ್ ಮತ್ತು ಅಕ್ರಮಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 1.55 ಲಕ್ಷ ರೂ. ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.