ಬಂಟ್ವಾಳ (www.vknews. in) : ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ಉಪಾಧ್ಯಕ್ಷರಾಗಿ ರವಿಶಂಕರ ಹೊಳ್ಳ ಮಣ್ಣೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಸಂಘದ ಕೇಂದ್ರ ಕಚೇರಿಯಲ್ಲಿ ಸಹಕಾರಿ ಸಂಘಗಳ ಅಧಿಕಾರಿ ಎನ್.ಜೆ.ಗೋಪಾಲ್ ಅವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಗೋಪಾಲ್ ಅವರನ್ನು ಸಮ್ಮಾನಿಸಲಾಯಿತು. ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.
ನಿರ್ದೇಶಕರಾದ ಸುಂದರ ನಾಯ್ಕ, ಚಂದ್ರಶೇಖರ ಶೆಟ್ಟಿ, ನಾರಾಯಣ ಪೂಜಾರಿ, ಲಕ್ಷ್ಮೀನಾರಾಯಣ ಹೆಗ್ಡೆ, ಶಿವಯ್ಯ ಪರವ, ಪ್ರಭಾಕರ ಪಿ.ಎಂ., ಶುಭಕರ ಶೆಟ್ಟಿ, ಸರೋಜಿನಿ ಡಿ. ಶೆಟ್ಟಿ, ಹರ್ಷಿಣಿ ಪುಷ್ಪಾನಂದ, ಶಶಿಧರ ನಾಯ್ಕ,ಡಾ| ರಾಮಕೃಷ್ಣ ಎಸ್., ಮಾಜಿ ಅಧ್ಯಕ್ಷ ಚಂದ್ರಶೇಖರ ಭಟ್ ಯು.ಎಸ್., ಲೋಕೇಶ್ ಆಚಾರ್ಯ, ಶ್ರೀಧರ ಶೆಟ್ಟಿ ಭಂಡಾರದಬೆಟ್ಟು, ಹರೀಂದ್ರ ಪೈ, ಕಾಂತಪ್ಪ ಕರ್ಕೇರ, ಶಂಕರ ಶೆಟ್ಟಿ ಬೆದ್ರಮಾರ್,ಶೇಖರ ಅಗಲ್ದೋಡಿ, ಹರೀಶ್ ಪ್ರಭು, ಹರೀಶ್ಚಂದ್ರ ಶೆಟ್ಟಿಗಾರ್, ರತ್ನಾಕರ ಪಿ.ಎಂ., ಸತೀಶ್ ಕರ್ಕೇರ, ಪಂ.ಅ.ಅಧಿಕಾರಿ ಯಮುನಪ್ಪ ಕೊರವರ, ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಕೇಶವ ಕಿಣಿ ಎಚ್., ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಬಿತಾ ಡಿ. ಮತ್ತು ಸಿಬಂದಿ ವರ್ಗ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.