(www.vknews.in) : ಆಧುನಿಕ ಯುಗದಲ್ಲಿ ಸಮುದಾಯದ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದು ನಾವು ಕಾಣುವ ಸಂಗತಿಯಾಗಿದೆ.
ಸಮುದಾಯದ ಯುವಕರಿಗೆ ದೀನೀ ಜ್ಞಾನದ ಕೊರತೆಯೋ ಅಥವಾ ಇನ್ನೇನಾದರೂ ಕಾರಣಗಳಿಂದ ಈ ರೀತಿಯ ಅನೇಕ ಮಾರಕ ಚಟಗಳಿಗೆ ಬಲಿಯಾಗುತ್ತಿರುವವರ ಬಗ್ಗೆ ಗಮನ ಹರಿಸಿ ಅವರನ್ನು ದೀನೀ ಚೌಕಟ್ಟಿನೊಳಗೆ ಬೆಳೆಯುವಂತೆ ಪ್ರಯತ್ನಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಅಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ತಿಳಿಸಿದರು.
ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಹುಟ್ಟೂರಾದ ಪೂಡಲ್ – ಬಟ್ಯಡ್ಕ ನಿರ್ಮಾಣವಾದ ಅಬೂಬಕ್ಕರ್ ಸಿದ್ದೀಖ್ ಮಸೀದಿಯಲ್ಲಿ ನಡೆದ ಬದ್ರ್ ಮೌಲಿದ್ ಮಜ್ಲಿಸ್ ನ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಅವರು ಮಾತನಾಡಿದರು.
ಬದ್ರೀಂಙಳ್ ರವರು ಪರಿಶುದ್ಧ ದೀನಿಗಾಗಿ ಅನೇಕ ತ್ಯಾಗಗಳನ್ನು ಅನುಭವಿಸಿರುತ್ತಾರೆ. ಅವರನ್ನು ನೆನಪಿಸುವುದು ಜೀವನದ ಭಾಗವಾಗಿದೆ. ಅವರನ್ನು ಸ್ಮರಿಸುತ್ತಾ ಅವರ ಮದ್ಹ್ ಹಾಗೂ ಮೌಲಿದ್ ಓದುವಾಗ ಒಳ್ಳೆಯ ನಿಯ್ಯತ್’ನಿಂದ, ಆ ಮಜ್ಲಿಸ್ ನಲ್ಲಿ ಪಾಲ್ಗೊಂಡರೆ ಖಂಡಿತವಾಗಿಯೂ ಅವರು ಉದ್ದೇಶಿಸಿದ ಕಾರ್ಯವು ಯಶಸ್ಸು ಕಾಣಲಿದೆ ಎಂದು ಹೇಳಿದರು.
ಬೇಕಲ್ ಉಸ್ತಾದ್ ರವರ ಬಗ್ಗೆ ಹೇಳುವುದಾದರೆ, ಅವರ ಜೀವನವು ಅತ್ಯಂತ ಸೂಕ್ಷ್ಮತೆಯಿಂದ ಕೂಡಿತ್ತು. ‘ತಾಜುಲ್ ಫುಖಹಾಅ್’ ಎಂಬ ಅರ್ಹ ಪದವಿ ಪಡೆದಿದ್ದ ಫಿಕ್ಹ್ ಜ್ಞಾನದ ಅತಿರಥರೆನಿಸಿ ಸರ್ವ ಉಲಮಾಗಳೆಡೆಯಲ್ಲಿಯೂ ಗಣ್ಯ ಸ್ಥಾನ ಪಡೆದು ಮೇರು ಮಟ್ಟಕ್ಕೇರಿದ್ದರೂ, ಅವರ ವಿನಯ, ಸಾಮಾನ್ಯರೊಡನೆಯೂ ಸಹಜವಾಗಿ ಸರಳವಾಗಿ ಒಡನಾಡುವ ಮಧುರ ವ್ಯಕ್ತಿತ್ವ ಅವರ್ಣನೀಯವಾಗಿತ್ತು ಅಂತಹವರು ಜನಿಸಿದ ಊರಿನಲ್ಲಿರುವ ನೀವು ಅತ್ಯಂತ ಧನ್ಯರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಮಸೀದಿಯ ಅಧ್ಯಕ್ಷರಾದ ಎ ಪಿ ಅಬೂಬಕ್ಕರ್ ಸಖಾಫಿ ಪೂಡಲ್ ಮಾತನಾಡಿ, ಮಸೀದಿಯ ಶಿಲಾನ್ಯಾಸದಿಂದ ಪ್ರಾರಂಭವಾಗಿ, ಮುಕ್ತಾಯದವರೆಗೂ, ನಿರ್ಮಾಣ ಕಾರ್ಯಗಳಿಗಾಗಿಯೂ, ಇನ್ನಿತರ ಉಪಕರಣಗಳನ್ನು ನೀಡಿ ಮಸೀದಿಯ ಅಭಿವೃದ್ಧಿಯಲ್ಲಿ ಭಾಗಿಗಳಾದ ಹಲವು ದಾನಿಗಳು ಮಾಡಿದ ಸಹಾಯವನ್ನು ಸ್ಮರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದ ಕಲ್ಮಿಂಜ ಜುಮಾ ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್ ರವರು ಮಾತನಾಡಿ, ಒಂದು ಕಡೆ ಮಸೀದಿ ನಿರ್ಮಾಣವಾದರೆ ಆ ಪ್ರದೇಶ ಹಸಿರುಮಯವಾಯಿತು ಎಂದರ್ಥವಾಗಿದೆ. ಅಲ್ಲಿ ಯಾವಾಗಲೂ ದೀನೀ ವಿಷಯಗಳಾಗಿರುತ್ತದೆ ನಡೆಯುತ್ತಿರುವುದು. ಅದೇ ರೀತಿಯಲ್ಲಿಯೇ ಮುನ್ನಡೆಯಬೇಕು, ಎಲ್ಲರೂ ಪರಸ್ಪರ ಒಗ್ಗಟ್ಟಿನಿಂದ ದೀನೀ ಸ್ಥಾಪನೆಯನ್ನು ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಮಿಂಜ ಹಯಾತುಲ್ ಇಸ್ಲಾಂ ಮದರಸ ದ ಅಬೂಬಕ್ಕರ್ ಅಮಾನಿ ಉಸ್ತಾದ್, ಅಬ್ದುಲ್ ಸಲಾಂ ಜೌಹರಿ, ಕಲ್ಮಿಂಜ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಪೂಡಲ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪಡ್ಪು, ಕೋಶಾಧಿಕಾರಿ ಉಸ್ಮಾನ್ ಹೊಸಮನೆ, ಅಬೂಬಕ್ಕರ್ ಸಿದ್ದೀಕ್ ಮಸೀದಿ ಉಪಾಧ್ಯಕ್ಷರಾದ ಅಹ್ಮದ್ ಕುಂಞಿ ಬಟ್ಯಡ್ಕ, ಪ್ರಧಾನ ಕಾರ್ಯದರ್ಶಿ ಹನೀಫ್ ಕೆದ್ಮೂಲೆ, ಕೋಶಾಧಿಕಾರಿ ಮುಹಮ್ಮದ್ (ಅಬ್ಬು) ಬಟ್ಯಡ್ಕ ಸಹಿತ ಊರಿನ ಹಿರಿಯ ಕಿರಿಯರೆಲ್ಲರೂ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.