ಮಲಪ್ಪುರಂ (www.vknews.in) : ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಮುಂಡಕುಳಂ ಮೂಲದ ಆಮಿನಾ ಬೀವಿ ಎಂಬವರ ಪುತ್ರ ಮುಹಮ್ಮದ್ ಶಮ್ಮಾಸ್ (11) ಮೃತಪಟ್ಟ ವಿಧ್ಯಾರ್ಥಿ. ಶುಕ್ರವಾರ ಸಂಜೆ 4.15ರ ಸುಮಾರಿಗೆ ಕೊಂಡೊಟ್ಟಿ- ಎಡವಣ್ಣವರ ರಸ್ತೆಯ ಮುಂಡಕುಲಂ ಮಲಬಾರ್ ಆಡಿಟೋರಿಯಂ ಬಳಿ ಅಪಘಾತ ಸಂಭವಿಸಿದೆ.
ಅವಿಲ್ ಮಿಲ್ಕ್ ಕುಡಿಯಲು ಹೋಗಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಶನಿವಾರ ಮದರಸಾ ಪಬ್ಲಿಕ್ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಲಾಗಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.