ಮಲಪ್ಪುರಂ (www. vknews.in) : ಕುಟಿಪ್ಪುರಂನ ಕೊಟ್ಟಕ್ಕಲ್ನಲ್ಲಿ ಕಾರು ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಕೊಳಕ್ಕಾಡ್ ಕುಟ್ಟಿಪುರಂ ಮನುಕುಟ್ಟಿಪಾಡಿ ಚೇಲಕ್ಕರ ಅಹ್ಮದ್ ಬಿನ್ ಕಬೀರ್ ಎಂಬವರ ಪುತ್ರಿ ಸಿತಾರಾ (19) ಮೃತರು.
ಈ ತಿಂಗಳ 3 ರಂದು ಸಿತಾರ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಪಲ್ಟಿಯಾಗಿ ಲಾರಿಯಡಿಗೆ ವಾಹನ ಬಿದ್ದು, ಕಾಲಿಗೆ ಗಂಭೀರ ಗಾಯವಾಗಿ ಎರ್ನಾಕುಲಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆ ಮಲಪ್ಪುರಂನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ. ಸರೀನಾ ತಾಯಿ. ಸಹೋದರ ಮಹಮ್ಮದ್ ಶಮ್ಮಾಸ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.