ಬಂಟ್ವಾಳ (www.vknews. in) : ಸುಲ್ತಾನ್ ಸ್ಪೋರ್ಟ್ ಕ್ಲಬ್ ಸುರಿಬೈಲ್ ಇದರ ಆಶ್ರಯದಲ್ಲಿ SPL ಸೀಸನ್-10 ಪ್ರೀಮಿಯರ್ ಲೀಗ್ ಬಿಡ್ ಮಾದರಿಯ ಆಯ್ದ ಕ್ರೀಡಾಪಟುಗಳ ಕ್ರಿಕೇಟ್ ಪಂದ್ಯಾಟ ಪೆಬ್ರವರಿ 27- ಹಾಗೂ 28 ಮಂಗಳವಾರ ಮತ್ತು ಬಧವಾರ ಎರಡು ದಿನಗಳ ಕಾಲ ಸುರಿಬೈಲ್ ಅಙನಿಮಾರ್ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪಂದ್ಯಾಕೂಟದ ಉದ್ಘಾಟನೆಯನ್ನು ಕೊಳ್ನಾಡು ಗ್ರಾ.ಪಂಚಾಯತ್ ಸ್ಥಳೀಯ ಸದಸ್ಯರೂ,ಹಿರಿಯ ಕ್ರಿಕೆಟಿಗ ಅಬ್ದುಲ್ ಹಮೀದ್ ಹಾಗೂ ಅಬ್ದುಲ್ ರಜಾಕ್ ಜಂಟಿಯಾಗಿ ಉದ್ಘಾಟಿಸಿದರು.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡೆಯೊಂದಿಗೆ ಮಾಜಿಯಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಸನ್ಮಾನಿಸಲಾಯಿತು. ಬಶೀರ್ ಗೇರುಕಟ್ಟೆ ಮತ್ತು ಹಮೀದ್ ಸುಫಾರಿ( ಸ್ಥಳದಾನ ನೀಡಿದವರು) ಮಜೀದ್ ಸುರಿಬೈಲ್ ( ಮಾಜಿ ಆಟಗಾರರು ಸುಲ್ತಾನ್ ಸುರಿಬೈಲ್) ಸಪ್ವಾನ್ ಕಾಡಂಗಡಿ ( ಮಾಜಿ ಆಟಗಾರರು ಸುಲ್ತಾನ್ ಸುರಿಬೈಲ್) ಅಝೀಝ್ ಸುರಿಬೈಲ್ ( ಮಾಜಿ ಆಟಗಾರರು ಸುರಿಬೈಲ್) ರಜಾಕ್ ಸುರಿಬೈಲ್ ( ರಾಜಕೀಯ ಮುಖಂಡರು) ಮಸೂದ್ ಕಾಡಂಗಡಿ ( ಮಾಜಿ ಆಟಗಾರರು ಸುಲ್ತಾನ್ ಸುರಿಬೈಲ್) ಇವರು ಗಣ್ಯರ ಸಮ್ಮುಖದಲ್ಲಿ ಸನ್ಮಾನಿತಗೊಂಡರು.
ಕ್ರೀಡಾಕೂಟವು ಪೈನಲ್ ಹಂತದವರೆಗೂ ರೋಮಾಂಚನಕಾರಿಯಾಗಿ ನಡೆದು ಪ್ರಥಮ ಸ್ಥಾನವನ್ನು ಡಿಜೆ ಅಶ್ರಪ್ ಮಾಲಕತ್ವದ ಐಕಾನ್ ರಶೀದ್ ಬಾಬ,ಹೈದರ್ ಅದ್ದಿ ನಾಯಕತ್ವವನ್ನು ಒಳಗೊಂಡ ಸಿ.ಎಸ್.ಕೆ ಮದಕ ಪಡೆದುಕೊಂಡರೆ.ದ್ವೀತೀಯ ಸ್ಥಾನವನ್ನು ಹಾರೀಸ್ ಪಿಕೆ ಮತ್ತು ಹಾರೀಶ್ ಸುರಿಬೈಲ್ ಮಾಲಕತ್ವದ ಐಕಾನ್ ಸನ್ವಾಜ್,ಬಶೀರ್ ಬಚ್ಚು ನಾಯಕತ್ವವನ್ನು ಒಳಗೊಂಡ ನೈಟ್ ರೈಡರ್ಸ್ ತಂಡ ಪಡೆದುಕೊಂಡಿತ್ತು.ಉತ್ತಮ ದಾಂಡುಗಾರರಾಗಿ ಅನ್ವರ್ ಮುನ್ನೂರು,ಉತ್ತಮ ಎಸೆತಗಾರರಾಗಿ ಪಯಾಝ್ ಸೆವೆನ್ ಸ್ಟಾರ್ ಕಲ್ಪನೆ,ಅಲ್ ರೌಂಡರ ಆಟದೊಂದಿಗೆ ಆರೆಂಜ್ ಕ್ಯಾಪ್ ಪಡೆದ ರಶೀದ್ ಬಾಬ ಕಲ್ಲಡ್ಕ ಪಡೆದುಕೊಂಡರು…
ತೀರ್ಪುಗಾರರಾಗಿ ಮನ್ಸೂರ್ ನಂದಾವರ,ನಿಝಾಮ್ ನಂದಾವರ,ಅಶ್ರಪ್ ನಂದಾವರ ನಡೆಸಿದರೆ,ಉತ್ತಮ ವಾಕ್ ಚಾತುರ್ಯದೊಂದಿಗೆ ಕಮೆಂಟೆಂಟರಾಗಿ ಅನ್ಸಾರ್ ಕೊಡಂಗಾಯಿ,ವಿನೀತ್ ಸೆರ್ಕಳ, ಇರ್ಪಾನ್ ಕಲ್ಲಡ್ಕ,ಅಬೂ ತ್ವಾಹೀರ್ ಸುಳ್ಯ ರಾಜ್ಯಮಟ್ಟದ ರೀತಿಯಲ್ಲಿ ನಡೆಸಿ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದರು..ಕ್ರೀಡಾಕೂಟದ ನೇರಪ್ರಸಾರವನ್ನು ಸೆಕ್ಸಸ್ ಸ್ಪೋಟ್ಸ್ ಕುಕ್ಕರಬೆಟ್ಟು ವರದಿ ಮಾಡಿತ್ತು,ಅಲ್ಲದೆ ಕ್ರಿಕೆಟ್ ಕ್ರೀಡಾಕೂಟವು ಎಲ್ಲಾ ವಿಭಾಗದಲ್ಲೂ ಮಾದರಿಯಾಗಿ ಅಂತರಾಷ್ಟ್ರೀಯ ಕ್ರೀಡಾಕೂಟದಂತೆ ಬಾಸವಾಗಿದ್ದು, ನೋಡುಗರನ್ನು,ಕ್ರೀಕೆಟ್ ಪ್ರೇಮಿಗಳನ್ನು ನಿಬ್ಬೆರಗುಗೊಳಿಸುವಂತೆ ಮಾಡಿತ್ತು…
ಗ್ರಾಮೀಣ ಪ್ರದೇಶವಾದ ಸುರಿಬೈಲ್ ಪರಿಸರದಲ್ಲಿ ಈ ಮಟ್ಟದ ಕ್ರಿಕೇಟ್ ಪಂದ್ಯಾಕೂಟವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಪಾರೂಕ್, ಹೈದರ್ ಅದ್ದಿ,ಆಸೀಪ್ ಆಪು,ಇಮ್ರಾನ್ ಇಮ್ಮ,ಆಸಿಪ್ ಮಜಲ್,ಉದಯರಾಜ್ ನಾರ್ಶ,ಆಸೀಪ್ ಜಿಮ್,ಅಶ್ರಪ್,ಅಳಿಯಾಕ,ಹಾರೀಸ್ ,ಜಬ್ಬಾರ್ ಅಖ್ವಾ ಪ್ರಮುಖ ಪಾತ್ರವಹಿಸಿದರು…ಈ ಕಾರ್ಯಕ್ರಮದ ಯಶಸ್ವಿ ಪಾಲುದಾರರಾಗಿ ಅನಿವಾಸಿ ಬಾರತೀಯರಾದ ಹಾರೀಶ್ ಪಿ.ಕೆ. ಸೌದಿ ಅರೇಬಿಯಾ, ಶರೀಪ್ ಪಿ.ಕೆ.ಸೌದಿ ಅರೇಬಿಯಾ,ಸಲೀಂ ಕಾಡಂಗಡಿ ಸೌದಿ ಅರೇಬಿಯಾ, ತೌಸೀರ್ ತಾಸಿ,ಸಲೀಂ ಸಿ.ಎಮ್ ದುಬಾಯಿ,ಹಮೀದ್ ಅಡಿಕೆ ವ್ಯಾಪಾರಸ್ಥರು,ಅಬ್ದುಲ್ ಹಮೀದ್ ಸುರಿಬೈಲ್ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್,ರಜಾಕ್ ಸುರಿಬೈಲ್ ಪಾಲುದಾರರೆನಿಸಿಕೊಂಡರು…
ಈ ಸಂದರ್ಭದಲ್ಲಿ ಸಚಿವರಾದ ಶ್ರೀ. ಬಿ.ರಮನಾಥ ರೈ, ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು,ಬಾಲಕೃಷ್ಣ ಸೆರ್ಕಳ ಮಾಜಿ ಅದ್ಯಕ್ಷರು ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು, ಶಿವಪ್ರಸಾದ್ ಶೆಟ್ಟಿ ಅದ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ,ನಾರಾಯಣ ಶೆಟ್ಟಿ ಕುಲ್ಯಾರ್ ತಾಲೂಕು ಪಂಚಾಯತ್ ಸದಸ್ಯರು,ಖಾದರ್ ಕೆ.ಪಿ.ಬೈಲ್,ಮೊಹಮ್ಮದ್ ಆದಿಲ್ ಅಯಾನ್ ಬಿಎನ್ ಅದ್ಯಕ್ಷರು ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು, ಹಸೈನಾರ್ ತಾಳಿತ್ತನೂಜಿ ಸಮಾಜಸೇವಕರು ಕ್ರೀಡಾಕೂಟಕ್ಕೆ ಆಗಮಿಸಿ ಶುಭಕೋರಿದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.