ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ನೆಲೆಸಿಕುವ ವಲಸಿಗರ ಕುಟುಂಬ ಸದಸ್ಯರಿಗೆ ಲೆವಿ ವಿಧಿಸಿದ ತರುವಾಯ ಅನೇಕ ಕುಟುಂಬಗಳು ಲೆವಿ ತೆರಲಾಗದೆ ತಂತಮ್ಮ ತಾಯ್ನಾಡಿಗೆ ಮರಳುತ್ತಿರುವ ಹಿನ್ನಲೆಯಲ್ಲಿ ವಲಸಿಗರ ಕುಟುಂಬ ಸದಸ್ಯರ ಲೆವಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸೌದಿ ಹಣಕಾಸು ಸಚಿವ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಹಣಕಾಸು ಸಚಿವ ಮುಹಮ್ಮದ್ ಅಲ್ ಜದಾನ್ “ವಲಸಿಗರ ಕುಟುಂಬಗಳ ಮೇಲಿನ ಲೆವಿ ಕುರಿತು ಪುನರ್ ಪರಿಶೀಲನೆ ಮಾಡಲು ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ನೀಡುಲ ವರದಿಯ ಆಧಾರದಲ್ಲಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.