ಜೆದ್ದಾ(www.vknews.in): ಭಾರತದ ಐಪಿಲ್ ತಂಡವಾದ ರಾಜಸ್ಥಾನ ರಾಯಲ್ಸ್ 2024 ಮತ್ತು 2025 ರಲ್ಲಿ ಭಾರತದ ಪ್ರೀಮಿಯರ್ T20 ಕ್ರಿಕೆಟ್ ಲೀಗ್ನಲ್ಲಿ ತನ್ನ ಅಧಿಕೃತ ಉಡುಪುಗಳ ಎದೆಯ ಮೇಲೆ NEOM ನ ಕಾರ್ಪೊರೇಟ್ ಬ್ರ್ಯಾಂಡ್ ಲೋಗೋದೊಂದಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲಿದೆ. ಇದರಿಂದಾಗಿ ವ್ಯಾಪಕವಾದ ಜಾಗತಿಕ ಪ್ರೇಕ್ಷಕರಲ್ಲಿ NEOM ಕುರಿತು ಹೆಚ್ಚಿನ ಅರಿವು ಮೂಡಿಸುತ್ತದೆ” ಎಂದು ನಿಯೋಮ್ ಸಿಟಿ ಪತ್ರಿಕಾ ಪ್ರಕಟಣೆ ಸೋಮವಾರ ತಿಳಿಸಿದೆ. ಸೌದಿಯ ವಾಯುವ್ಯ ತಬೂಕ್ ಪ್ರಾಂತ್ಯದಲ್ಲಿ ನಿರ್ಮಿಸಲಾಗುತ್ತಿರುವ NEOM, ಸುಸ್ಥಿರವಾಗಿ ಯೋಜಿತ ನಗರಾಭಿವೃದ್ಧಿ ಉಪಕ್ರಮವೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯೋಜನೆಯು ರಾಷ್ಟ್ರಕ್ಕೆ ಆರ್ಥಿಕ ಎಂಜಿನ್ ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ವ್ಯಾಪಾರ ಭವಿಷ್ಯವನ್ನು ಚಾಲನೆ ಮಾಡುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಸ್ವದೇಶಿಗಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು ಈ ಪ್ರಾಜೆಕ್ಟ್ ನ ಮುಖ್ಯ ಉದ್ದೇಶವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.