ಜಿದ್ದಾ(www.vknews.in):ಭಾನುವಾರ ಸಂಜೆ ರಂಜಾನ್ ತಿಂಗಳ ಚಂದ್ರದರ್ಶನವನ್ನು ವೀಕ್ಷಿಸಲು ಸೌದಿ ಸುಪ್ರೀಂ ಕೋರ್ಟ್ ದೇಶದ ಜನತೆಗೆ ಮನವಿ ಮಾಡಿದೆ. ಭಾನುವಾರ ಶಅಬಾನ್ 29 ಪೂರ್ಣಗೊಂಡಿರುವುದರಿಂದ ಅಂದು ರಾತ್ರಿ ರಂಝಾನ್ ಚಂದ್ರದರ್ಶನವಾಗುವ ಸಾಧ್ಯತೆಯಿದೆ. ಚಂದ್ರದರ್ಶನವಾಗಿರುವುದನ್ನು ಕಂಡರೆ ಹತ್ತಿರದ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂ ಕೋರ್ಟ್ ವಿನಂತಿಸಿದೆ. ಚಂದ್ರದರ್ಶನದ ಸಾಕ್ಷಿಗಳು ತಮ್ಮ ಸಾಕ್ಷ್ಯವನ್ನು ದಾಖಲಿಸಲು ನ್ಯಾಯಾಲಯ ಕೇಳಿದೆ. ಭಾನುವಾರ ಚಂದ್ರದರ್ಶನವಾದರೆ, ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರ ರಂಜಾನ್ ಉಪವಾಸ ಆರಂಭವಾಗಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.