ಜೆದ್ದಾ(www.vknews.in):ರಂಜಾನ್ನಲ್ಲಿ ಎರಡು ಅಥವಾ ಮೂರು ಬಾರಿ ಉಮ್ರಾ ನಿರ್ವಹಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಿಸಿದೆ. ಪ್ರತಿಯೊಬ್ಬರೂ ಒಂದು ಉಮ್ರಾವನ್ನು ಮಾತ್ರ ನಿರ್ವಹಿಸಬೇಕು. ಈ ಮೂಲಕ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಇತರರಿಗೆ ಅನುಕೂಲವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಉಮ್ರಾ ಯಾತ್ರಿಕರಿಗೆ ಸೌಲಭ್ಯ ಕಲ್ಪಿಸಲು ಎಲ್ಲರೂ ಸಹಕರಿಸಬೇಕೆಂದು ಸಚಿವಾಲಯ ಆಗ್ರಹಿಸಿದೆ. ಇದೇ ವೇಳೆ ಎರಡನೇ ಬಾರಿ ಉಮ್ರಾ ನಸ್ಕ್ ಅರ್ಜಿ ಸಲ್ಲಿಸುವಾಗ ರಂಜಾನ್ ನಲ್ಲಿ ಉಮ್ರಾ ಪುನರಾವರ್ತನೆ ಮಾಡಲು ಅನುಮತಿ ನೀಡುವುದಿಲ್ಲ ಎಂಬ ಉತ್ತರ ಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.